Site icon PowerTV

ಕನ್ನಡದಲ್ಲಿ ‘ಟರ್ಮಿನೇಟರ್ ಡಾರ್ಕ್​ ಫೇಟ್​’ – ಟ್ರೈಲರ್ ರಿಲೀಸ್ ಮಾಡಿದ ಸುದೀಪ್ ಹೇಳಿದ್ದೇನು?

ಹಾಲಿವುಡ್​ ಸ್ಟಾರ್ ಅರ್ನಾಲ್ಡ್​ ಅಭಿನಯದ ‘ಟರ್ಮಿನೇಟರ್ ಡಾರ್ಕ್​ ಫೇಟ್​’ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು, ಸದ್ಯ ಸಿನಿಮಾ ಟ್ರೈಲರ್ ಬಿಡುಗಡಯಾಗಿದೆ. ‘ಟರ್ಮಿನೇಟರ್ ಡಾರ್ಕ್​ ಫೇಟ್​’ ಕನ್ನಡ ಟ್ರೈಲರ್ ಅನ್ನು ಅಭಿನಯ ಚಕವ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ಅರ್ನಾಲ್ಡ್ ಲೀಡ್ ರೋಲಿನಲ್ಲಿ ನಟಿಸಿರುವ ಮಾಸ್​ ಕಂ ಥ್ರಿಲ್ಲರ್ ಸಿನಿಮಾ ‘ಟರ್ಮಿನೇಟರ್ ಡಾರ್ಕ್​ ಫೇಟ್​’ ಕನ್ನಡ ಟ್ರೈಲರ್​ಗೆ ಸ್ವತಃ ಕಿಚ್ಚ ಕೂಡ ಫುಲ್ ಫಿದಾ ಆಗಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್, ”ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿ ಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್‌ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ. ನವೆಂಬರ್ 1ರಂದು ಸಿನಿಮಾ ರಿಲೀಸ್ ಆಗಲಿದೆ.

Exit mobile version