ಡೈರೆಕ್ಟರ್ ಜೋಗಿ ಪ್ರೇಮ್ ಅವರಿಗಿಂದು 41ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿಯೇ ಬರ್ತ್ ಡೇ ಪಾರ್ಟಿ ಜೋರಾಗಿ ನಡೆದಿದೆ. ಪತ್ನಿ ರಕ್ಷಿತಾ ಪ್ರೇಮ್ ಹಾಗೂ ನಟಿ ರಚಿತಾ ರಾಮ್ ಬರ್ತ್ಡೇ ಸಂಭ್ರಮದಲ್ಲಿ ಭಾಗಿಯಾಗಿದ್ರು. ರಕ್ಷಿತಾರ ಆತ್ಮೀಯ ಗೆಳತಿ, ಗುಳಿಕೆನ್ನೆ ಬೆಡಗಿ ರಚಿತಾ, ಗಾಯಕ ನವೀನ್ ಸಜ್ಜು ಮತ್ತಿತರರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಜೋಶ್ ಹೆಚ್ಚಿಸಿತ್ತು.
ಅದರಲ್ಲೂ ರಕ್ಷಿತಾ ಪ್ರೇಮ್ ಮತ್ತು ರಚಿತಾರಾಮ್ ಸುಂಟರಗಾಳಿ ಸಾಂಗಿಗೆ ಸಖತ್ ಸ್ಟೆಪ್ ಹಾಕಿ ಗಮನಸೆಳೆದರು. ರಕ್ಷಿತಾ ಪ್ರೇಮ್ ಬರ್ತ್ಡೇ ಸೆಲೆಬ್ರೇಷನ್ನಿನ ಕ್ಷಣಗಳ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ ಪತಿಗೆ ವಿಶ್ ಮಾಡಿದ್ದಾರೆ.
