Site icon PowerTV

ಬಿಗ್​ಬಾಸ್ ಮನೆಯಿಂದ ಪ್ರಬಲ ಸ್ಪರ್ಧಿ ಔಟ್!

ಕನ್ನಡ ಬಿಗ್ ಬಾಸ್ ಸೀಸನ್ 7 ಆರಂಭವಾಗಿ ವಾರವಾಗಿಲ್ಲ. ಈ ನಡುವೆ ಪ್ರಬಲ ಸ್ಪರ್ಧಿಯೊಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಆರಂಭದಲ್ಲೇ ಅನಾರೋಗ್ಯದ ಕಾರಣದಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮನೆಯಿಂದ ಹೊರಬಂದು, ಬಳಿಕ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಇದೀಗ ಮತ್ತೊಬ್ಬರು ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಹೌದು, ಬಾಲಿವುಡ್ಡಿನಲ್ಲೂ ಮಿಂಚಿರುವ ಡ್ಯಾನ್ಸರ್ ಕಿಶನ್ ಜಾಂಡಿಸ್​ನಿಂದ ಬಳಲುತ್ತಿದ್ದು, ಅನಿವಾರ್ಯವಾಗಿ ದೊಡ್ಮನೆ ಬಿಟ್ಟು ಹೊರಬಂದಿದ್ದಾರೆ. ಚಿಕಿತ್ಸೆ ಪಡೆದು ವಾಪಸ್ ಹೋಗ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

Exit mobile version