ಶಿವಮೊಗ್ಗ/ದಾವಣಗೆರೆ : ದೇವರ ಕೋಣಕ್ಕಾಗಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಎರಡು ಊರುಗಳ ನಡುವೆ ಜಗಳ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು 7 ವರ್ಷದ ಹಿಂದೆ ಮಾರಿಕಾಂಬಾ ದೇವಿಗಾಗಿ ಕೋಣವನ್ನು ಬಿಟ್ಟಿದ್ದರು. ಗ್ರಾಮದಲ್ಲಿದ್ದ ಕೋಣ ಕಳೆದ ಮೂರು ದಿನಗಳ ಹಿಂದೆ ಏಕಾಏಕಿ ಕಾಣೆಯಾಗಿತ್ತು. ಕೋಣ ಕಾಣೆಯಾದ ಕಾರಣ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.
ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಕೋಣ ಮೂರು ದಿನಗಳ ಬಳಿಕ ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ ಪತ್ತೆಯಾಗಿದೆ. ಕೋಣವನ್ನು ಕಂಡ ಮಲ್ಲೂರು ಗ್ರಾಮಸ್ಥರು ಈ ಕೋಣ ತಮ್ಮ ದೇವರಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಈ ನಡುವೆ ಕೋಣ ನಮ್ಮದೆಂದು ಎರಡೂ ಗ್ರಾಮಸ್ಥರ ನಡುವೆ ಕಿತ್ತಾಟ ನಡೆದಿದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.