ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಕನ್ನಡದ ಕೀರ್ತಿ. ಸಮಾಜಮುಖಿ ಕಾರ್ಯಗಳು, ತನ್ನ ಸರಳತೆ ಮೂಲಕ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಸುಧಾಮೂರ್ತಿ ಅವರದ್ದು. ಪ್ರತಿಯೊಬ್ಬರಿಗೂ ಮಾದರಿ ನಮ್ಮ ಸುಧಾಮೂರ್ತಿ. ಇವರ ಜೀವನಗಾಥೆ ಎಲ್ಲರಿಗೂ ಆದರ್ಶ. ಹೀಗಾಗಿ ಅವರ ಜೀವನಾಧಾರಿತ ಚಿತ್ರ ಬಂದರೆ ಹೇಗಿರುತ್ತೆ? ಅದಕ್ಕೂ ಕಾಲ ಸನ್ನಿಹಿತವಾಗಿದೆ. ಸುಧಾಮೂರ್ತಿಯವರ ಬಯೋಪಿಕ್ ಬರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಸುಧಾಮೂರ್ತಿ ಬಯೋಪಿಕ್ನಲ್ಲಿ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ನಟಿ ಅಭಿನಯಿಸಲಿದ್ದಾರೆ. ಅಶ್ವಿನಿ ಐಯ್ಯರ್ ತಿವಾರಿ ಸಿನಿಮಾ ನಿರ್ಮಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ಸ್ಟಾಗ್ರಾಮ್ನಲ್ಲಿ ಅಶ್ವಿನಿ ತಿವಾರಿ ಸುಧಾಮೂರ್ತಿಯೊಂದಿಗಿನ ಫೋಟೋ ಹಾಕಿ, ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.