ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಪರ ಭಾಷಾ ಚಿತ್ರರಂಗದಲ್ಲೂ ಗುರುತಿಸಿ ಕೊಂಡಿರುವ ಸ್ಟಾರ್. ಅದರಲ್ಲೂ ಬಾಲಿವುಡ್ ಮತ್ತು ಟಾಲಿವುಡ್ನಲ್ಲಿ ಕನ್ನಡದ ‘ಮಾಣಿಕ್ಯ’ನ ದರ್ಬಾರು ಜೋರಾಗಿಯೇ ಇದೆ. ಚಂದನವನದ ‘ರನ್ನ’ನ ಕಾಲ್ಶೀಟ್ಗೆ ಹಿಂದಿ, ತೆಲುಗು ಚಿತ್ರರಂಗ ಕೂಡ ಕಾಯ್ತಿದೆ ಅನ್ನೋದು ಕನ್ನಡಿಗರು ಖುಷಿ ಪಡಬೇಕಾದ ವಿಷಯ.
ಸದ್ಯ ಸುದೀಪ್ ಸಲ್ಮಾನ್ ಖಾನ್ ಜೊತೆ ಬಾಲಿವುಡ್ನ ‘ದಬಾಂಗ್ -3’ನಲ್ಲಿ ನಟಿಸ್ತಿರೋದು ಗೊತ್ತೇ ಇದೆ. ದಬಾಂಗ್ -3 ಹಿಂದಿ ಮಾತ್ರವಲ್ಲದೆ ನಮ್ಮ ಕನ್ನಡ ಭಾಷೆಯಲ್ಲಿ ತೆರೆಕಾಣುತ್ತಿರುವ ಸುದ್ದಿಯೂ ನಿಮ್ಗೆ ಗೊತ್ತು. ವಿಶೇಷ ಏನಪ್ಪ ಅಂದ್ರೆ ಕನ್ನಡದಲ್ಲಿ ಸಲ್ಮಾನ್ ಖಾನೇ ತಮ್ಮ ಡೈಲಾಗ್ಗಳನ್ನು ಡಬ್ ಮಾಡಲಿದ್ದಾರೆ. ಸಲ್ಮಾನ್ ಖಾನಿಗೆ ಕನ್ನಡದಲ್ಲಿ ಡಬ್ ಮಾಡುವಂತೆ ಪ್ರೇರೇಪಿಸಿದ್ದು ನಮ್ಮ ಕಿಚ್ಚನೇ. ಅವರೇ ಸಲ್ಲುಗೆ ಕನ್ನಡ ಪಾಠ ಮಾಡ್ತಿದ್ದಾರಂತೆ. ಇನ್ನು ದಬಾಂಗ್ 3 ಡಿ.20ರಂದು ರಿಲೀಸ್ ಆಗಲಿದೆ.