Site icon PowerTV

Bigg Boss 7 : ಮೊದಲ ದಿನವೇ ಟ್ರೋಲ್​ ಆದ ಸ್ಪರ್ಧಿ..!

ಕನ್ನಡ ಬಿಗ್​ಬಾಸ್ ಸೀಸನ್​ 7 ನಿನ್ನೆಯಷ್ಟೇ ಆರಂಭವಾಗಿದೆ. 18 ಸ್ಪರ್ಧಿಗಳು ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ವ್ಯಕ್ತಿತ್ವ. ಎಲ್ಲರೂ ಒಂದೇ ಮನೆಯಲ್ಲಿ ವಾಸ. 100 ದಿನಗಳ ಕಾಲ ಸಿಟ್ಟು, ಟಾಸ್ಕ್​, ಗಲಾಟೆ, ರಾಜಕೀಯ, ವಿವಾದಗಳ ನಡುವೆ ಮನೆಯಲ್ಲಿ ಕೊನೆಯವರೆಗೂ ಉಳಿದುಕೊಂಡವರು ವಿನ್ನರ್ ಆಗುತ್ತಾರೆ.
ಅಸಲಿ ಆಟ ಇಂದಿನಿಂದ ಶುರುವಾಗುತ್ತಿದೆ..! ಟ್ರೋಲ್​ ಪೇಜ್​ಗಳಿಗಂತೂ ಬಿಗ್​ಬಾಸ್​ ಸೀಸನ್​ ಹಬ್ಬ. ಈ ಬಾರಿ ಸ್ಪರ್ಧಿಯೊಬ್ಬರು ದೊಡ್ಮನೆ ಸೇರಿದ ದಿನವೇ ಟ್ರೋಲಿಗೊಳಗಾಗಿದ್ದಾರೆ.


ಹೌದು ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಮೊದಲ ದಿನವೇ ಟ್ರೋಲ್​ ಆಗಿರುವ ಸ್ಪರ್ಧಿ. ರಾಜು ತಾಳಿಕೋಟೆಯವರಿಗೆ ಇಬ್ಬರು ಪತ್ನಿಯರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಟ್ರೋಲ್ ಆಗಿದ್ದಾರೆ
”ರಾಜು ತಾಳಿಕೋಟಿಯ ಇಬ್ಬರು ಹೆಂಡತಿಯವರ ಸಂಭಂಧಿಕರು ವೋಟ್ ಹಾಕಿದ್ರೆ ಸಾಕು, 99 ದಿನ ಸೇಫು”, ” #BBK7 ಫ್ಯಾಮಿಲಿ ಟ್ರೀ ಇದ್ರೆ ಕೊಡ್ರೀ ನಮ್ ರಾಜು ತಾಳಿ ಕೋಟೆ ಅವರದ್ದು”, ”ರಾಜು ತಾಳಿಕೋಟೆ ಅವರ ಕುಟುಂಬ ಸದಸ್ಯರನ್ನ ಲೆಕ್ಕಾ ಹಾಕೋದ್ರಲ್ಲಿ ಬಿಗ್-ಬಾಸೆ ಮುಗಿದು ಹೋಗುತ್ತೆ ಏನೋ..?” ಅಂತೆಲ್ಲಾ ಟ್ರೋಲ್​ಗಳಾಗುತ್ತಿವೆ.

 

https://twitter.com/Vijaysoduu/status/1183423794532061184?ref_src=twsrc%5Etfw%7Ctwcamp%5Etweetembed%7Ctwterm%5E1183423794532061184&ref_url=https%3A%2F%2Fkannada.news18.com%2Fnews%2Fentertainment%2Fbigg-boss-kannada-7-contestant-list-raju-talikote-get-heavily-trolled-in-social-media-rmd-266723.html

https://twitter.com/AkshayVandure1/status/1183424406564954113?ref_src=twsrc%5Etfw%7Ctwcamp%5Etweetembed%7Ctwterm%5E1183424406564954113&ref_url=https%3A%2F%2Fkannada.news18.com%2Fnews%2Fentertainment%2Fbigg-boss-kannada-7-contestant-list-raju-talikote-get-heavily-trolled-in-social-media-rmd-266723.html

ಬಿಗ್​ ಬಾಸ್ 7 ಸ್ಪರ್ಧಿಗಳು
ಹಾಸ್ಯನಟ ಕುರಿ ಪ್ರತಾಪ್
ನಟಿ ಪ್ರಿಯಾಂಕಾ
ಪತ್ರಕರ್ತ ರವಿ ಬೆಳಗೆರಿ
ನಟಿ ಚಂದನಾ ಅನಂತಕೃಷ್ಣ
ಸಂಗೀತ ನಿರ್ದೇಶಕ ವಾಸುಕಿ ವೈಭವ್​
ನಟಿ ದೀಪಿಕಾ ದಾಸ್
ನಟ ಜೈ ಜಗದೀಶ್
ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ
ನಟಿ ಭೂಮಿ ಶೆಟ್ಟಿ
ಕಿಶನ್ ಬೆಳಗಲಿ
ನಟಿ ದುನಿಯಾ ರಶ್ಮಿ
ನಟ ಚಂದನ್ ಆಚಾರ್
ನಟಿ ಸುಜಾತಾ
ಹಾಸ್ಯನಟ ರಾಜು ತಾಳಿಕೋಟೆ
ನಿರೂಪಕಿ ಚೈತ್ರಾ ವಾಸುದೇವ್
ನಟಿ/ಬರಹಗಾರ್ತಿ ಚೈತ್ರ ಕೊಟೂರು
ನಟ ಶೈನ್ ಶೆಟ್ಟಿ
ನಟಹರೀಶ್ ರಾಜ್

Exit mobile version