Site icon PowerTV

ವಿನಯ್ ಗುರೂಜಿಯಿಂದ ಕಿಚ್ಚ ಸುದೀಪ್ ಗುಣಗಾನ : ಅಂದು ಅಪಹಾಸ್ಯ – ಇಂದು ಶ್ಲಾಘನೆ!

ಇತ್ತೀಚೆಗೆ ಸ್ಯಾಂಡಲ್​ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದ ಗೌರಿಗದ್ದೆ ದತ್ತಪೀಠದ ವಿನಯ್ ಗುರೂಜಿ ಇಂದು ಅದೇ ಸುದೀಪ್ ಅವರನ್ನು ಹಾಡಿಹೊಗಳಿದ್ದಾರೆ. ವಿನಯ್ ಗುರೂಜಿ ಕಿಚ್ಚನನ್ನು ಗುಣಗಾನ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
”ಸುದೀಪ್ ಕನ್ನಡ ನಾಡಿನ ಹೆಬ್ಬುಲಿ, ನಿಜವಾದ ಮಾಣಿಕ್ಯ. ಅವರು ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದವರು. ಸುದೀಪ್ ಅವರ ಸ್ವಾಭಿಮಾನ ಗುಣಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ. ಸುದೀಪ್ ಅವರನ್ನು ನಾನು ಗೌರವಿಸುತ್ತೇನೆ” ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ಅಪಾಹಸ್ಯ ಮಾಡಿರುವ ಬಗ್ಗೆ ಮಾತನಾಡಿದ ಅವರು, ಯುವಕರಿಗೆ ಬುದ್ಧಿ ಹೇಳುವುದಕ್ಕೆ ಸುದೀಪ್ ಹೆಸರು ಬಳಸಿದ್ದೇನೆ. ನಿಜವಾದ ಹುಲಿ ಬಂದ್ರೆ ನಾನು ಸಹ ಅಲ್ಲಿ ನಿಲ್ಲೋದಿಲ್ಲ. ವಿಡಿಯೋವನ್ನು ಕಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿ, ಸುದೀಪ್ ಸಾಧನೆಯನ್ನು ಕೊಂಡಾಡಿದ್ದಾರೆ.

”ಸುದೀಪ್​ ಸಿನಿಮಾ ನೋಡಿದ ಹುಡುಗರು ಹೇಳ್ತಾರೆ ಸುದೀಪ್ ಸಿನಿಮಾ ನೋಡಿದಾಗ ರೋಮವೆಲ್ಲಾ ಎದ್ದು ನಿಲ್ಲುತ್ತಂತೆ. ಹ, ಮಾಣಿಕ್ಯನಂತೆ, ಹೆಬ್ಬುಲಿಯಂತೆ..! ಅವನು ಹೆಬ್ಬುಲಿನಾ? ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾರೆ” ಅಂತ ವಿನಯ್ ಗುರೂಜಿ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. 

Exit mobile version