Site icon PowerTV

ಟಿಕ್​ಟಾಕ್​ನಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದ ಭೂಪ ಅರೆಸ್ಟ್..!

ಶಿವಮೊಗ್ಗ : ನಕಲಿ ಟಿಕ್‍ಟಾಕ್ ಖಾತೆಯಿಂದ ಮಹಿಳೆಯ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದ ವ್ಯಕ್ತಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಭದ್ರಾವತಿಯ ಗೋಣಿಬೀಡಿನ ಸಂಜಯ್ ಕುಮಾರ್ (23). ಈತ ಬೆಂಗಳೂರಲ್ಲಿ ಕ್ಯಾಬ್ ಚಾಲಕನಾಗಿದ್ದ ಎನ್ನಲಾಗಿದೆ. 
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಸಿಬ್ಬಂದಿ ಫೋಟೋ ವೈರಲ್ ಮಾಡಿದ್ದ ಈತ ಅದೇ ಮಹಿಳೆ ಹೆಸರಲ್ಲಿ ಟಿಕ್‍ಟಾಕ್ ಅಕೌಂಟ್ ತೆರೆದು, ಅದೇ ಮಹಿಳೆ ವಿಡಿಯೋಗೆ ಅಶ್ಲೀಲ ಧ್ವನಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಠಾಣಾಧಿಕಾರಿ ಗುರುರಾಜ್ ನೇತೃತ್ವದ ತಂಡದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಕಲಿ ಖಾತೆ ತೆರೆದು ದುರ್ಬಳಕೆ ಮಾಡಿಕೊಂಡ ಯಾರೇ ಆಗಲಿ ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸ್ ಇಲಾಖೆಗೆ ಸೂಚಿಸಿದೆ.

Exit mobile version