ಟೀಮ್ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಷ್ ಪಾಂಡೆಗೆ ಕಂಕಣಭಾಗ್ಯ ಕೂಡಿ ಬಂದಿದೆ. ಸ್ಟಾರ್ ಕ್ರಿಕೆಟಿಗ ಪಾಂಡೆ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಕರ್ನಾಟಕ ಮೂಲದ ನಟಿ ಅಶ್ರಿತಾ ಶೆಟ್ಟಿಯೊಡನೆ ಮನೀಷ್ ಪಾಂಡೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಡಿ.2ರಂದು ಮುಂಬೈನಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ ಅಂತ ವರದಿಯಾಗಿದೆ. ಅಶ್ರಿತಾ ತುಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಜನಪ್ರಿಯ ನಟ ಸಿದ್ಧಾರ್ಥ್ ಜೊತೆ ಕಾಲಿವುಡ್ನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಉದಯಂ ಎನ್ಎಚ್ 4, ಒರು ಕನ್ನಿಯಂ ಮೂನು ಕಳವಾನಿಕಳುಂ ಅಶ್ರಿತಾ ನಟನೆಯ ಹಿಟ್ ಚಿತ್ರಗಳು.
ಇನ್ನು ಮನೀಷ್ ಪಾಂಡ ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದು, ವೈಯಕ್ತಿಕವಾಗಿಯೂ ಸಾಲಿಡ್ ಪರ್ಫಾರ್ಮೆನ್ಸ್ ನೀಡ್ತಿದ್ದಾರೆ.