Site icon PowerTV

ಮತ್ತೆ ಖಾಕಿ ಡ್ರೆಸ್​ನಲ್ಲಿ ಶಿವರಾಜ್​ಕುಮಾರ್​ ..!

ಬ್ಯಾಕ್​​ ಟು ಬ್ಯಾಕ್ ಸಿನಿಮಾಗಳಲ್ಲಿ ಪೊಲೀಸ್​ ಅಧಿಕಾರಿಯಾಗಿ ಮಿಂಚಿ ಯಶಸ್ಸು ಪಡೆದ ಶಿವಣ್ಣನನ್ನು, ಸದ್ಯದಲ್ಲೇ ಮತ್ತೊಮ್ಮೆ ಖಾಕಿ ಖದರ್​ನಲ್ಲಿ ಕಣ್ತುಂಬಿಸಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಏಕೆಂದರೆ, ಹೊಸ ಚಿತ್ರದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಹ್ಯಾಟ್ರಿಕ್ ಹೀರೋ ತೆರೆ ಮೇಲೆ ಮಿಂಚಲಿದ್ದಾರೆ.
ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಟಗರಿಗೆ ಹೋಲಿಕೆ ಮಾಡಲಾಗಿದ್ದು. ಕೋಪ ಬಂದಾಗ, ಅನ್ಯಾಯ ಕಂಡಾಗ ಟಗರಿನಂತೆ ಗುದ್ದುವ ಖಡಕ್ ಪೋಲಿಸ್ ಅಧಿಕಾರಿಯಾಗಿ ಕಾಣಿಕೊಂಡಿದ್ರು. ಟಗರು ಶಿವ ಎಂಬ ಪಾತ್ರ ನಿರ್ವಹಿಸಿದ್ದ ಶಿವಣ್ಣ ಟಗರಿನಂತೆ ಗುಮ್ಮಿ ಪ್ರೇಕ್ಷಕರ ಮನ ಗೆದ್ದಿದ್ದರು.
ಇನ್ನು, ಈ ವರ್ಷ ತೆರೆಕಂಡ ರುಸ್ತುಂ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದು, ಒಂದು ಕಾಮನ್​ಮ್ಯಾನ್ ಹಾಗೂ ಇನ್ನೊಂದು ಶೇಡ್​​ನಲ್ಲಿ ಪೊಲೀಸ್​ ಇಲಾಖೆಯ ಸಿಂಹನಂತೆ, ಅದರಲ್ಲೂ ಬಿಹಾರದ ACPಯಾಗಿ ಮಿಂಚಿದ್ದರು. ಚಿತ್ರದಲ್ಲಿ ಶಿವಣ್ಣನ ಎನರ್ಜಿ ಹೈಲೈಟ್ ಆಗಿದ್ದು, ಕರುನಾಡ ಚಕ್ರವರ್ತಿಯ ಫಟಾಫಟ್ ಹಿಂದಿ ಭಾಷೆ ಕೇಳಿದರೆ ಮೈರೋಮಾಂಚನವಾಗುತ್ತಿತ್ತು.
 ಹೀಗೆ ಇತ್ತೀಚೆಗೆ ಎರಡು ಸಿನಿಮಾಗಳಲ್ಲಿ ಪೊಲೀಸ್​ ಅಧಿಕಾರಿಯಾಗಿ ತೆರೆ ಮೇಲೆ ಅಬ್ಬರಿಸಿದ ಶಿವಣ್ಣ ಮತ್ತೆ ತಮ್ಮ ಮುಂದಿನ ಸಿನಿಮಾದಲ್ಲಿ ಖಾಕಿ ತೊಟ್ಟು, ಘರ್ಜಿಸಲು ಸಿದ್ಧರಾಗುತ್ತಿದ್ದಾರೆ. ಬಹುನಿರೀಕ್ಷಿತ ಸಿನಿಮಾಗೆ ರವಿ ಅರಸು ನಿರ್ದೇಶನ ಮಾಡಲಿದ್ದಾರೆ. ಆದರೆ, ಈ ಚಿತ್ರದ ಟೈಟಲ್ ಸದ್ಯದಲ್ಲೇ ರಿವೀಲ್ ಆಗಲಿದೆ.
ಇನ್ನು, ಹೆಸರಿಡದ ಈ ಚಿತ್ರದಲ್ಲಿ ಶಿವರಾಜ್​​ಕುಮಾರ್ ವಿಭಿನ್ನವಾಗಿ ಹಾಗೂ ಅದ್ಭುತವಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ಸಾಗಲಿದೆಯಂತೆ.ಆದರೆ ಚಿತ್ರದ ಕಥೆ, ನಾಯಕ ಪಾತ್ರದ ವಿವರ, ಲುಕ್ ಇತ್ಯಾದಿ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಜೊತೆಗೆ ನಾಯಕಿ ಸೇರಿ ಇನ್ನುಳಿದ ತಾರಾಗಣ, ತಂತ್ರಜ್ಞರ ತಂಡ ಇನ್ನಷ್ಟೇ ಆಯ್ಕೆ ಆಗಬೇಕಿದೆ.
ಸದ್ಯ ಶಿವರಾಜ್‌ ಕುಮಾರ್ ‘ಭಜರಂಗಿ 2’ ಚಿತ್ರದ ಶೂಟಿಂಗ್​​​ನಲ್ಲಿ ತೊಡಗಿಸಿಕೊಂಡಿದ್ದು, ಆ ಬಳಿಕ ಈ ಹೊಸ ಸಿನಿಮಾದಲ್ಲಿ ತೊಡಗಲಿದ್ದಾರೆ. 

ವಿಶೇಷವೆಂದರೆ ಈ ಚಿತ್ರಕ್ಕೆ ದಕ್ಷಿಣಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಸತ್ಯಜ್ಯೋತಿ ಫಿಲಮ್ಸ್​​​’ ಬಂಡವಾಳ ಹೂಡುತ್ತಿದೆ. ಹೀಗಾಗಿ ತುಂಬಾ ಅದ್ದೂರಿಯಾಗಿಯೇ ಸಿನಿಮಾ ನಿರ್ಮಾಣವಾಗುವ ವಿಶ್ವಾಸವಿದೆ.
ಶಿವಣ್ಣ-ರಚಿತಾ ರಾಮ್ ನಟನೆಯ ಆಯುಷ್ಮಾನ್​ಭವ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ನಂತರ ಭಜರಂಗಿ-2 ಬರಲಿದೆ. ಹೀಗೆ ಶಿವಣ್ಣನ ಸಾಲು ಸಾಲು ಸಿನಿಮಾಗಳು ಬರ್ತಾ ಇರೋದ್ರಿಂದ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.

Exit mobile version