Site icon PowerTV

ರಾಬರ್ಟ್​​ ಚೆಲುವೆಯ ಇನ್​​ಸ್ಟಾಗ್ರಾಮ್​​, ಟ್ವಿಟರ್ ಅಕೌಂಟ್ ಹ್ಯಾಕ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್​ ಸಿನಿಮಾ ನಾಯಕಿ ಆಶಾ ಭಟ್ ಅವರ ಇನ್​​ಸ್ಟಾಗ್ರಾಮ್ ಮತ್ತು ಟ್ವೀಟರ್​ ಅಕೌಂಟ್ ಹ್ಯಾಕ್ ಆಗಿದೆ. ಸ್ವತಃ ಅವರೇ ಈ ವಿಷಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಇನ್​​ಸ್ಟಾಗ್ರಾಮ್ ಹಾಗೂ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದ್ದು, ಕೂಡಲೇ ಅದನ್ನು ಅದನ್ನು ಕಂಡು ಹಿಡಿದು ಸರಿಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು ಅಂತ ಆಶಾ ಭಟ್ ಪೋಸ್ಟ್ ಮಾಡಿದ್ದಾರೆ.
ಇನ್ನು ಆಶಾಭಟ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾಗಿದ್ದು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಕ್ಕೆ ನಾಯಕಿಯಾಗಿ ಸ್ಯಾಂಡಲ್​ವುಡ್​​ಗೆ ಪ್ರವೇಶಿಸ್ತಿದ್ದಾರೆ.

Exit mobile version