Site icon PowerTV

ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕುಮಾರಸ್ವಾಮಿ ಫುಲ್ ಗರಂ..!

ಮಂಡ್ಯ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​​ಡಿಕೆ, ವಿಜಯೇಂದ್ರ ರಾಜಕೀಯದಲ್ಲಿ ಇನ್ನು ಕಣ್ಣು ಬಿಡ್ತಿರೋ ಹುಡುಗ. ಅವನು ನನ್ನ ಬಗ್ಗೆ ಮಾತಾಡ್ತಾನೆ. ಅದ್ರಲ್ಲೂ ಜಾತಿ ಹೆಸರಲ್ಲಿ ನಾನು ರಾಜಕೀಯ ಮಾಡ್ತೀನಿ ಅಂದಿದ್ದಾನೆ. ಆತ ಮೊದಲು ಅವರ ಲಿಂಗಾಯತ ಸಮುದಾಯದ ಬಗ್ಗೆ ನೋಡಲಿ. ನನ್ನ ಜಾತಿ ಹೆಸರಲ್ಲಿ ನಾನು ಯಾವತ್ತು ರಾಜಕೀಯ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಿನ್ನೆ ಕೆ.ಆರ್ ಪೇಟೆಯಲ್ಲಿ ಮಾತನಾಡಿದ್ದ ವಿಜಯೇಂದ್ರ, ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದು ನಮ್ಮಪ್ಪ. ಜೆಡಿಎಸ್​​​ನವರು ಒಕ್ಕಲಿಗರ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ ಅಂದಿದ್ದರು.

Exit mobile version