Site icon PowerTV

ನಡುರಸ್ತೇಲಿ ಯುವತಿಯನ್ನು ಚುಡಾಯಿಸಿದ ಹುಚ್ಚ ವೆಂಕಟ್​..!

ದೊಡ್ಡಬಳ್ಳಾಪುರ : ಸ್ಯಾಂಡಲ್​ವುಡ್​ ನಟ, ನಿರ್ದೇಶಕ ಹುಚ್ಚವೆಂಕಟ್​ ರಂಪಾಟ ಮುಂದುವರೆದಿದೆ. ಸದಾ ಒಂದಿಲ್ಲೊಂದು ಕಿರಿಕಿರಿಯಿಂದ ಸುದ್ದಿಯಲ್ಲಿರುವ ವೆಂಕಟ್ ಈಗ ನಡುರಸ್ತೆಯಲ್ಲೇ ಯುವತಿಯನ್ನು ಚುಡಾಯಿಸಿದ್ದಾರೆ.
ಯಲಹಂಕ – ದೊಡ್ಡಬಳ್ಳಾಪುರ ಟೋಲ್​ ಬಳಿ ಹಾಡಹಗಲೇ ನಡುರಸ್ತೇಲಿ ಯುವತಿಗೆ ವೆಂಕಟ್​ ಚುಡಾಯಿಸಿದ್ದು, ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ಮಡಿಕೇರಿಯಲ್ಲಿ ಕಾರಿನ ಗಾಜು ಪುಡಿ ಪುಡಿ ಮಾಡಿ ರಗಳೆ ರಂಪಾಟ ಮಾಡಿಕೊಂಡಿದ್ದ ವೆಂಕಟ್ ಈಗ ಮತ್ತೊಂದು ರಂಪಾಟ ಮಾಡಿದ್ದಾರೆ.
ಹುಚ್ಚಾಟವನ್ನು ಜನ ಪ್ರಶ್ನಿಸಿದ್ದಕ್ಕೆ ವೆಂಕಟ್ ತಮ್ಮ ಕಾರಿನ ಮೇಲೆ ತಾನೇ ಕಲ್ಲು ಎತ್ತಾಕಿ ಕಿಡಿಕಾರಿದ್ದಾರೆ. ಪೊಲೀಸ್ ಸ್ಟೇಷನ್​ಗೆ ಕಾಲ್ ಮಾಡಿದ್ರೂ ಕ್ಯಾರೇ ಎನ್ನದೆ ವೆಂಕಟ್​ ಪುಂಡಾಟ ಮೆರೆದಿದ್ದಾರೆ.

Exit mobile version