Site icon PowerTV

ಕೊನೆಗೂ ಎಚ್ಚೆತ್ತ ಕೇಂದ್ರ ಸರ್ಕಾರ – ಅಬ್ಬಾ..ನೆರೆಪೀಡಿತರಿಗೆ ಸ್ಮಾಲ್​​ ರಿಲೀಫ್..!

ನವದೆಹಲಿ : ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮೇಲೆ ನಿರ್ಲಕ್ಷ್ಯ ತೋರಿದ್ದ ಕೇಂದ್ರ ಕೊನೆಗೂ ಸ್ವಲ್ಪಮಟ್ಟಿಗೆ ರಾಜ್ಯದತ್ತ ಚಿತ್ತಹರಿಸಿದೆ. ನಿರಂತರ ಟೀಕೆಯ ಬಳಿಕ ಇದೀಗ ಎಚ್ಚೆತ್ತ ಕೇಂದ್ರ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.
ಕರ್ನಾಟಕಕ್ಕೆ 1200 ಕೋಟಿ ಮಧ್ಯಂತರ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ರಾಜ್ಯದ ನೆರೆಪೀಡಿತರಿಗೆ ಸ್ಮಾಲ್​ ರಿಲೀಫ್ ಸಿಕ್ಕಂತಾಗಿದೆಯಷ್ಟೇ. ಕೇಂದ್ರದಿಂದ ಇನ್ನೂ ದೊಡ್ಡಮಟ್ಟಿನ ಪರಿಹಾರ ಬರಬೇಕಿದೆ. ಕೇಂದ್ರಕ್ಕೆ ವರದಿ ಸಲ್ಲಿಸಿದ್ದ ರಾಜ್ಯ ಸರ್ಕಾರ 38 ಸಾವಿರ ಕೋಟಿ ರೂ ನೀಡುವಂತೆ ಕೇಳಿಕೊಂಡಿತ್ತು. ತಕ್ಷಣಕ್ಕೆ ಕನಿಷ್ಠ ಪಕ್ಷ ಮೂರುವರೆ ಸಾವಿರ ಕೋಟಿಯಾದ್ರೂ ಕೊಡಿ ಅಂತ ರಾಜ್ಯ ಸರ್ಕಾರ ಕೇಂದ್ರವನ್ನು ಕೇಳಿತ್ತು. ಆದರೆ, ಕೇಂದ್ರ 1200 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದೆ.

Exit mobile version