ಬೆಂಗಳೂರು : ಮಾಸ್ಟರ್ ಓಂ ಇದೀಗ ದಕ್ಷಿಣ ಭಾರತದ ಫ್ಯಾಷನ್ ಕ್ಷೇತ್ರದಲ್ಲಿ ಟಾಪ್ ಒನ್ ಸ್ಥಾನ ಅಲಂಕರಿಸಿರುವ ಮೊದಲ ಕನ್ನಡಿಗ.
ಕರ್ನಾಟಕ ಫ್ಯಾಷನ್ ಫೆಸ್ಟಿವಲ್ ವೀಕ್ನಲ್ಲಿ ನಾಲ್ಕನೇ ಸೀಸನ್ಗೂ ಮುಂದುವರೆದ ಬ್ರಾಂಡ್ ಅಂಬಾಸಡರ್ ಮಾತ್ರವಲ್ಲ, ದಕ್ಷಿಣ ಭಾರತದ ಟಾಪ್ ಕಿಡ್ ಮಾಡೆಲ್ನ ಮೊದಲ ಸ್ಥಾನ ಅಲಂಕರಿಸಿದ್ದಾನೆ.
ಬೆಂಗಳೂರಿನ ಎಲಿಮೆಂಟ್ಸ್ ಮಾಲ್ನಲ್ಲಿ ನಡೆದ ಕೆಎಫ್ಎಫ್ಡಬ್ಲ್ಯೂನಲ್ಲಿ 4 ನೇ ಸೀಸನ್ನಲ್ಲೂ ಸಿಲೆಬ್ರಿಟಿ ಬ್ರಾಂಡ್ ಅಂಬಾಸಡರ್ ಆಗಿ ರ‍್ಯಾಂಪ್ ವಾಕ್ ಮಾಡಿದ ಮಾಸ್ಟರ್ ಓಂಗೆ ಮಿಸೆಸ್ ಸೌತ್ ಇಂಡಿಯಾ ಕ್ವೀನ್, ಫಿಟ್ನೆಸ್ ದಿವಾ ಹಾಗೂ ಕಿಡ್ಸ್ ಗ್ರೂಮಿಂಗ್ ಸ್ಪೆಷಲಿಸ್ಟ್ ಜ್ಯೋತ್ಸ್ನಾ ಅವರು ಫಲಕ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಇದುವರೆಗೂ ಕರ್ನಾಟಕ ಸೂಪರ್ ಕಿಡ್ ಮಾಡೆಲ್ ಹಾಗೂ ಸ್ಯಾಂಡಲ್ವುಡ್ ಬಾಲನಟನಾಗಿದ್ದ ಮಾಸ್ಟರ್ ಓಂ ಇದೀಗ ಒಂದು ಹೆಜ್ಜೆ ಮುಂದಿರಿಸಿದ್ದಾನೆ. ಸೌತ್ ಇಂಡಿಯಾದ ಕಿಡ್ ಮಾಡೆಲ್ಗಳಲ್ಲಿ ಟಾಪ್ ಸ್ಥಾನ ಅಲಂಕರಿಸಿದ್ದಾನೆ. ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾನೆ.
ಫ್ಯಾಷನ್ ಕ್ಷೇತ್ರದಲ್ಲಿಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿ ಇದ್ದಾನೆ. ಈಗಾಗಲೇ 35 ಜಾಹೀರಾತು ಹಾಗೂ 8 ಸಿನಿಮಾಗಳಲ್ಲಿ ನಟಿಸಿರುವ ಓಂ ಜಗ್ಗೇಶ್ ಮುಖ್ಯಭೂಮಿಯಲ್ಲಿ ಅಭಿನಯಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲೂ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ.



Pinco canlı kazino çox real hiss yaradır. Canlı mərclər üçün rəsmi səhifə pinco bet giriş. Pinco casino rəsmi saytı təhlükəsizdir.
Pinco kazino təhlükəsizlik baxımından ideal platformadır.