Site icon PowerTV

ಕಾಫಿ ನಾಡಿನ ಯುವತಿ ಸಾಧನೆಗೆ ವಿರಾಟ್​ ಕೊಹ್ಲಿ ಫಿದಾ..!

ಪ್ರತಿಭೆ ಯಾರೊಬ್ಬರ ಸೊತ್ತಲ್ಲ.. ಸಾಧಿಸುವ ಛಲವಿದ್ದರೆ ಯಾವ ಸಮಸ್ಯೆಗಳೂ ಅಡ್ಡಿಯಲ್ಲ…! ಅಡೆತಡೆಗಳನ್ನು ಮೀರಿ ನಿಲ್ಲುವುದೇ ಸಾಧನೆ ಅಲ್ಲವೇ? ಹೀಗೆ ಕಾಫಿ ನಾಡಿನ ಅಂಧ ಯುವತಿಯೊಬ್ಬರು ತನ್ನೆಲ್ಲಾ ಸಮಸ್ಯೆ, ನೋವುಗಳನ್ನು ದಾಟಿ ಮಹತ್ತರ ಸಾಧನೆ ಮಾಡಿದ್ದಾರೆ..! ಆಕೆಯ ಸಾಧನೆಗೆ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್ ವಿರಾಟ್​ ಕೊಹ್ಲಿಯೇ ಫಿದಾ ಆಗಿದ್ದಾರೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಡ್ನಹಳ್ಳಿಯ ಯುವತಿ ರಕ್ಷಿತಾ ರಾಜುಗೆ ಇಂಡಿಯನ್ ಸ್ಫೋರ್ಟ್ಸ್​​ ಹಾನರ್ ಅವಾರ್ಡ್​​ ಬಂದಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಫೌಂಡೇಶನ್​ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಲೆನಾಡ ರಕ್ಷಿತಾ ಹಾಲಿವುಡ್​, ಬಾಲಿವುಡ್​ ದಿಗ್ಗಜರ ಜೊತೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ವಿರಾಟ್​ ಕೊಹ್ಲಿ ಫೌಂಡೇಶನ್​ ಸಿನಿಮಾ, ಕ್ರಿಕೆಟ್, ಅಥ್ಲೆಟಿಕ್ಸ್​​ನಲ್ಲಿ ಸಾಧನೆಗೈದವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ. ಏಷ್ಯಾ ಪ್ಯಾರಾ ಗೇಮ್ಸ್​ನಲ್ಲಿ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ರಕ್ಷಿತಾ ಸಹ ಈ ಬಾರಿ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಈಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು.

Exit mobile version