Site icon PowerTV

ಯಡಿಯೂರಪ್ಪರನ್ನು ಕಡೆಗಣಿಸಿದ್ರೆ ಬಿಜೆಪಿಗೆ ಪೆಟ್ಟು ಬೀಳುತ್ತೆ : ರಾಜ್ಯಾಧ್ಯಕ್ಷರಿಗೆ ಎಚ್ಚರಿಕೆ..!

ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ರೆ ಬಿಜೆಪಿಗೆ ಪೆಟ್ಟು ಬೇಳುತ್ತೆ ಅಂತ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​​​ ಅವರಿಗೆ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ನೇರಾ ನೇರ ಎಚ್ಚರಿಸಿದ್ದಾರೆ.
ನಳಿನ್​ ಕುಮಾರ್​​ ಅವರಿಗೆ ಬಹಿರಂಗ ಪತ್ರ ಬರೆದಿರುವ ಭೀಮಾಶಂಕರ್​, ಸಿಎಂ ಯಡಿಯೂರಪ್ಪ ಕಡೆಗಣಿಸಿದ್ರೆ ಬಿಜೆಪಿಗೆ ಬೀಳುತ್ತೆ ಪೆಟ್ಟು . ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳೋದೇ ಕಷ್ಟಕಷ್ಟ. ತಳ ಮಟ್ಟದಲ್ಲಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದ ಜನನಾಯಕ ಯಡಿಯೂರಪ್ಪ. ಸಂಘಟನೆ ಹಳಿ ತಪ್ಪಿದಾಗ ಸ್ವಾರ್ಥಿಗಳನ್ನು ಪಕ್ಷದಿಂದ ದೂರ ಇಟ್ಟಿದ್ದರು . 25 ಸಂಸದರು ಗೆದ್ದು ಬರುವಲ್ಲಿ ಯಡಿಯೂರಪ್ಪ ಹೆಸರಿನ ಪಾತ್ರ ದೊಡ್ಡದಿದೆ. ಯಡಿಯೂರಪ್ಪ ಸಿಎಂ ಆದ ಮೇಲೆ ಮತ್ತೆ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿಯಲ್ಲೇ ಬುದ್ಧಿವಂತರ ಮುಖವಾಡ ಧರಿಸಿದವರಿಂದ ಅಂಥ ಧೋರಣೆ. ಅವರಿಂದ ಪಕ್ಷಕ್ಕೆ ಅಪಾಯ! ನೀವು ಅವರಿಂದ ದೂರ ಇರಬೇಕೆಂದು ಕಟೀಲ್​ಗೆ ಸಲಹೆ ನೀಡಿದ್ದಾರೆ.
ವಿಜಯೇಂದ್ರ ಕಡೆಗಣಿಸುತ್ತಿರುವುದಕ್ಕೂ ಬಹಿರಂಗ ಪತ್ರದಲ್ಲಿ ಆಕ್ರೋಶ. ಯಡಿಯೂರಪ್ಪ ಬಿಟ್ಟು ಪಕ್ಷ ಅಧಿಕಾರಕ್ಕೆ ತರಲು ನಿಮ್ಮಿಂದ ಸಾಧ್ಯವಿದೆಯಾ? ನೀವು ಹೊಸದಾಗಿ ರಾಜ್ಯಾಧ್ಯಕ್ಷರಾಗಿದ್ದೀರಿ! ಯೋಗ್ಯತೆ ಇಲ್ಲದವರ ಮಾತು ಕೇಳ್ಬೇಡಿ. ಯಡಿಯೂರಪ್ಪ ಕಡೆಗಣಿಸಿದ್ರೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ದುಷ್ಪರಿಣಾಮ ಬೀರಲಿದೆ, ಮುಂದೆಯೂ ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ತಿಳಿಸಿದ್ದಾರೆ.

Exit mobile version