Site icon PowerTV

ಇಂದು ‘ಯಜಮಾನ’ರ 69ನೇ ಜಯಂತೋತ್ಸವ

ವಿಷ್ಣುವರ್ಧನ್​… ಚಂದನವನದ ಯಜಮಾನ..! ವಿಷ್ಣುದಾದ ಇವತ್ತು ನಮ್ಮೊಂದಿಗಿಲ್ಲ…ಅವರ ನೆನಪು ಮಾತ್ರ ಅಜರಾಮರ. ದಾದಾ ಇದ್ದಿದ್ರೆ ಅವರ ಹುಟ್ಟುಹಬ್ಬವನ್ನು ಇಡೀ ನಾಡು ಸಂಭ್ರಮದಿಂದ ಆಚರಿಸುತ್ತಿತ್ತು. ಅಭಿಮಾನಿಗಳೊಂದಿಗೆ ದಾದಾ ಸಂಭ್ರಮಿಸ್ತಿದ್ರು. ಆದರೆ ಇಂದು ಅವರ ನೆನಪಲ್ಲಿ 69ನೇ ಜಯಂತೋತ್ಸವ ಆಚರಿಸಲಾಗುತ್ತಿದೆ.
ಹೌದು, ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಅಭಿಮಾನ್​ ಸ್ಟೂಡಿಯೋದಲ್ಲಿನ ದಾದಾ ಸಮಾಧಿ ಸ್ಥಳಕ್ಕೆ ಅಭಿಮಾನಿಗಳು ಆಗಮಿಸಿ ಪೂಜಿಸಲ್ಲಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ನಿತ್ಯದ ಕಚೇರಿ ಕೆಲಸ ಆರಂಭಿಸಿದರು. ಅದೇರೀತಿ ರಾಜ್ಯದೆಲ್ಲೆಡೆ ಅಭಿಮಾನಿಗಳು ರಕ್ತದಾನ, ಅನ್ನದಾನ ಮೊದಲಾದ ಸತ್ಕಾರ್ಯಗಳ ಮೂಲಕ ನೆಚ್ಚಿನ ನಟನ ನೆನಪಲ್ಲಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಇನ್ನು ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 20ರಂದು ನಿಷ್ಕರ್ಶ ಸಿನಿಮಾವನ್ನು ರಿ-ರಿಲೀಸ್ ಮಾಡಲಾಗುತ್ತಿದೆ.

Exit mobile version