Site icon PowerTV

ಭಾರತ ತಂಡಕ್ಕೆ ಆಯ್ಕೆಯಾದ 15 ವರ್ಷದ ಕ್ರಿಕೆಟರ್..!

ಭಾರತ ತಂಡಕ್ಕೆ 15 ವರ್ಷದ ಕ್ರಿಕೆಟರ್ ಆಯ್ಕೆಯಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕಲ್ಲ… ಬದಲಿಗೆ ಹರ್ಮನ್​ ಪ್ರೀತ್ ನಾಯಕತ್ವದ ಭಾರತ ಮಹಿಳಾ ಟಿ20 ತಂಡಕ್ಕೆ..!
ಹೌದು, ಭಾರತ ಕ್ರಿಕೆಟ್ ಇತಿಹಾದಲ್ಲೇ ಇದು ಮೊದಲ ಬಾರಿಗೆ 15 ವರ್ಷದ ಮಹಿಳಾ ಕ್ರಿಕೆಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರಿಯಾಣದ ಯುವ ಆಟಗಾರ್ತಿ ಶಫಾಲಿ ವರ್ಮಾ ತಂಡದಲ್ಲಿ ಸ್ಥಾನ ಪಡೆದವರು. ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಶಫಾಲಿ ರಾಷ್ಟ್ರೀಯ ತಂಡದಲ್ಲಿ ಅತೀ ಕಿರಿಯ ವಯಸ್ಸಲ್ಲೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀನಿಯರ್ ವುಮೆನ್ಸ್ ಟಿ-20ಯಲ್ಲಿ ನಾಗಲ್ಯಾಂಡ್​ ವಿರುದ್ಧ 56 ಬಾಲ್​ಗಳಲ್ಲಿ 128ರನ್ ಬಾರಿಸಿದ್ದರು ರೋಹ್ಟಕ್​ನ ಈ ಯುವ ಬ್ಯಾಟ್ಸ್​ವುಮೆನ್.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ರವರ ಅಪ್ಪಟ ಅಭಿಮಾನಿಯಾಗಿರುವ ಶಫಾಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಲ್ಲೇ ರಾಷ್ಟ್ರೀಯ ತಂಡದಲ್ಲಿ ಸದ್ದು ಮಾಡಲು, ಖಾಯಂ ಸ್ಥಾನ ಹೊಂದಲು ಶಫಾಲಿ ಸಜ್ಜಾಗಿದ್ದಾರೆ.

Exit mobile version