Site icon PowerTV

ಗುರುಗಳನ್ನು ನೆನೆದ ಸುದೀಪ್, ಉಪೇಂದ್ರ ಹೇಳಿದ್ದೇನು?

ಇಂದು ಶಿಕ್ಷಕರ ದಿನ. ಪ್ರತಿಯೊಬ್ಬರೂ ಕೂಡ ತಮ್ಮ ಶಾಲಾ ದಿನಗಳಿಂದ ಹಿಡಿದು ತಮ್ಮ ಬದುಕಿಗೆ ದಾರಿ ತೋರಿದ ಗುರುಗಳನ್ನು ನೆನೆಯುತ್ತಿದ್ದೇವೆ. ಅಂತೆಯೇ ಸ್ಯಾಂಡಲ್​ವುಡ್​ನ ಸ್ಟಾರ್ ನಟರುಗಳಾದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಗುರುಗಳನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
”ನಿನ್ನ ಒಳಗಿನ ವಿದ್ಯಾರ್ಥಿ ಕಲಿಯಲು ಸಿದ್ದನಾದರೆ ನಿನಗೆ ಎಲ್ಲವೂ ಎಲ್ಲರೂ ಶಿಕ್ಷಕರೇ” ಅಂತ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಇನ್ನು ಅದೇರೀತಿ ಸುದೀಪ್, ”ಪಾಠ ಹೇಳಿಕೊಟ್ಟು,ಬದುಕು ರೂಪಿಸಿ,ಗುರಿ ತೋರಿಸಿಕೊಟ್ಟ ಎಲ್ಲಾ ಗುರುಗಳಿಗೆ,, ಶಿಕ್ಷಕರ ದಿನಾಚರಣೆಯ ಶುಭಾಶಯಗಳು” ಅಂತ ಟ್ವೀಟ್ ಮಾಡಿದ್ದಾರೆ.

Exit mobile version