Site icon PowerTV

ಕೊಡಗಿನಲ್ಲಿ ಮತ್ತೆ ವರುಣನ ಆರ್ಭಟ..!

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆಯಲಿದ್ದು ಜನರಲ್ಲಿ  ಆತಂಕ ಮನೆಮಾಡಿದೆ.  

ಇತ್ತೀಚೆಗಷ್ಟೆ ನೆರೆಯಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದ ಜನರಲ್ಲಿ ವರುಣ ಮತ್ತೆ ಆತಂಕವನ್ನು ಸೃಷ್ಟಿ ಮಾಡಿದ್ದಾನೆ. ಕೊಡಗು ಜಿಲ್ಲೆಯಾದ್ಯಂತ ಮತ್ತೆ ಭಾರಿ ಮಳೆಯಾಗುತ್ತಿದ್ದು  ಈಗಾಗಲೇ ಕೊಡಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಮೈದುಂಬಿ ಹರಿಯುತ್ತಿದ್ದು ಭಾಗಮಂಡಲ, ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಇನ್ನು ಹಾರಂಗಿ ಡ್ಯಾಂನ ಒಳಹರಿವು ಹೆ್ಚ್ಚಾಗಿದ್ದು ಜಲಾಶಯದಿಂದ 15000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ, ನದಿ ಪಾತ್ರದ ಜನರಿಗೆ ಜಾಗರೂಕತೆಯಿಂದ ಇರಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

Exit mobile version