ಭಾರತದ ಬ್ಯಾಡ್ಮಿಂಟನ್ ತಾರೆ, ಚಿನ್ನದ ಬೆಡಗಿ ಪಿ.ವಿ ಸಿಂಧು ಅವರ ಬಯೋಪಿಕ್ ಬರಲಿದ್ದು, ಸಿಂಧು ಪಾತ್ರದಲ್ಲಿ ಬಾಲಿವುಡ್ನಲ್ಲಿ ಮಿಂಚುತ್ತಿರುವ ಕನ್ನಡತಿ ಮಿಂಚುವ ಸಾಧ್ಯತೆ ಇದೆ.
ಹೌದು, ಪಿ.ವಿ ಸಿಂಧು ಜೀವನಾಧಾರಿತ ಚಿತ್ರ ತೆರೆಕಾಣಲಿದ್ದು ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಪಿ.ವಿ ಸಿಂಧು ಅವರೇ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದಿದ್ದು, ಅವರಿಗೆ ಅಗತ್ಯವಿರೋ ಎಲ್ಲಾ ಮಾಹಿತಿಗಳನ್ನು ನೀಡಿದ್ದೇನೆ ಅಂದಿದ್ದಾರೆ. ದೀಪಿಕಾ ಪಡುಕೋಣೆ ನನ್ನ ಪಾತ್ರವನ್ನು ನಿರ್ವಹಿಸಿದ್ರೆ ಚೆನ್ನಾಗಿರುತ್ತೆ ಅಂತ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಬಗ್ಗೆ ಸಿನಿಮಾ ಬರ್ತಿರೋದು ಖುಷಿ ತಂದಿದೆ. ನಟಿ ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಅಂತ ತಿಳಿದಿದೆ. ಅವರ ತಂದೆ ಪ್ರಕಾಶ್ ಪಡುಕೋಣೆ ಕೂಡ ಖ್ಯಾತ ಬ್ಯಾಡ್ಮಿಂಟನ್ ಪ್ಲೇಯರ್. ವಿಶ್ವ ಚಾಂಪಿನ್ ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ರು. ಅವರು ಬ್ಯಾಡ್ಮಿಂಟನ್ ಆಟಗಾರರಿಗೆ ಸ್ಪೂರ್ತಿ. ಅವರ ಪುತ್ರಿ ದೀಪಿಕಾ ಪಡುಕೋಣೆ ಈ ಪಾತ್ರಕ್ಕೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯ ಅಂತ ಹೇಳಿದ್ದಾರೆ.
