Site icon PowerTV

ಚಂದನ್ ಶರ್ಮಾಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಿಎಸ್​ವೈ

ಬೆಂಗಳೂರು : ಪವರ್ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮಾರವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ಮಾಧ್ಯಮ ಕ್ಷೇತ್ರಕ್ಕೆ ಚಂದನ್ ಶರ್ಮಾರವರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಬಿಬಿಎಂಪಿ ನಾಡಪ್ರಭು ಕೆಂಪೇಗೌಡ ನಾಗರಿಕ ಪ್ರಶಸ್ತಿ ನೀಡಿದ್ದು, ಪಾಲಿಕೆಯ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಸಿಎಂರಿಂದ ಪ್ರಶಸ್ತಿ ಸ್ವೀಕರಿಸಿದರು.
ನಿಮ್ಮ ಪ್ರೀತಿಯ ಪವರ್ ಟಿವಿಯ ಚಂದನ್ ಶರ್ಮಾ ಸೇರಿದಂತೆ ಚಂಪಾ, ಮುಖ್ಯಮಂತ್ರಿ ಚಂದ್ರು, ರವಿವರ್ಮ ಕುಮಾರ್, ಮಾವಳ್ಳಿ ಶಂಕರ್, ಮಂಜುಳಾ ಗುರುರಾಜ್, ವಿದುಷಿ ರಮಾ ಪಿ, ಗುರುರಾಜ್‌ ಕರಜಗಿ, ಅಬ್ದುಲ್‌ ಬಷೀರ್‌, ರೂಪಾ ಡಿ ಮೊದಲಾದ 100 ಮಂದಿ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆಂಪೇಗೌಡ ಪ್ರಶಸ್ತಿ ಮಾತ್ರವಲ್ಲದೆ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯವರ ಹೆಸರಲ್ಲಿ 10 ಮಂದಿ ಸಾಧಕರಿಗೆ ಹಾಗೂ 5 ಸಂಸ್ಥೆಗಳಿಗೆ ಡಾ. ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಿ ಗೌರವಿಸಿದೆ.

Exit mobile version