ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ‘ಕುರುಕ್ಷೇತ್ರ’ದ ಸಕ್ಸಸ್ ಖುಷಿಯಲ್ಲಿದ್ದಾರೆ. ಕುರುಕ್ಷೇತ್ರದ ಯಶಸ್ಸು ದರ್ಶನ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದೆ.
ಸಾಮಾನ್ಯವಾಗಿ ಸ್ಟಾರ್ಗಳು ಸ್ಟಾರ್ ನೇಮ್, ಬಿರುದುಗಳಿಂದ ಗುರುತಿಸಿಕೊಳ್ಳುತ್ತಾರೆ. ಅಂತೆಯೇ ದರ್ಶನ್ ಚಾಲೆಂಜಿಂಗ್ ಸ್ಟಾರ್ ಎಂದೇ ಪ್ರಸಿದ್ಧರು. ಬಾಕ್ಸ್ ಆಫೀಸ್ ಸುಲ್ತಾನ, ಚಂದನವನದ ‘ಚಕ್ರವರ್ತಿ’, ಡಿ.ಬಾಸ್ ಹೀಗೆ ನಾನಾ ಹೆಸರಲ್ಲಿ ಕರೆಯಲ್ಪಡುವ ದರ್ಶನ್ ತೂಗದೀಪ್ ಅವರಿಗೆ ಮಹಿಳಾ ಅಭಿಮಾನಿಗಳು ಹೊಸ ಬಿರುದೊಂದನ್ನು ನೀಡಿ ಗೌರವಿಸಿದ್ದಾರೆ.
ಕುರುಕ್ಷೇತ್ರ ಸಿನಿಮಾ ಕಲೆಕ್ಷನ್ 100 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ದರ್ಶನ್ ಗೆ DFDH ಗರ್ಲ್ಸ್ ಗ್ರೂಪ್ ನವರು ಶತಕೋಟಿ ಸರ್ದಾರ ಎನ್ನುವ ಬಿರುದು ನೀಡಿ ಗೌರವಿಸಿದ್ದಾರೆ. ದರ್ಶನ್ ಅವರಿಗೆ ಸನ್ಮಾನಿಸಿ, ಸ್ಮರಣಿಕೆ ನೀಡುವ ಮೂಲಕ ಹೊಸ ಬಿರುದು ನೀಡಿದ್ದಾರೆ ಡಿಎಫ್ಡಿಎಚ್ ಗ್ರೂಪ್ನವರು. ಇನ್ಮುಂದೆ ದರ್ಶನ್ ಶತಕೋಟಿ ಸರ್ದಾರ..!
