ಪೋಷಕರೇ ಹುಷಾರ್…ಮೊಬೈಲ್ ಬಳಸೋ ಮಕ್ಕಳ ಮೇಲಿರಲೇಬೇಕು ನಿಮ್ಮ ಕಣ್ಣು. ನಿರ್ಲಕ್ಷ್ಯ ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆಯೇ ಸಾಕ್ಷಿ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಯಾದ ಪ್ರೀತಂ ಭಯಾನಕ ಪಬ್ಜಿ ಗೇಮ್ಗೆ ಬಲಿಯಾಗಿದ್ದಾನೆ. 16 ವರ್ಷದ ಬಾಲಕ ಪ್ರೀತಂ ಮೊಬೈಲ್ನಲ್ಲಿ ಗೇಮ್ ಆಡುತ್ತ ಮನೆಗೆ ಮರಳುತ್ತಿದ್ದ. ಮೊದಲೇ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಪ್ರೀತಂ ಮೊಬೈಲ್ ನಲ್ಲಿ ಆಡುತ್ತಾ ಮನೆಗೆ ಮರಳುವಾಗ ರಸ್ತೇಲಿ ಹಂಪ್ಸ್ಗೆ ಎಡವಿ ಬಿದ್ದದ್ದಾನೆ. ಆಗ ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಪ್ರೀತಂ . ಈಗ ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
