Site icon PowerTV

ಪಂಚ ಭಾಷೆಗಳಲ್ಲಿ ಬರಲಿದೆ ಶಿವಣ್ಣನ ಸಿನಿಮಾ..!

ಸ್ಯಾಂಡಲ್​ವುಡ್​​ ಸ್ಟಾರ್ ನಟರ ಸಿನಿಮಾಗಳು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಸಪ್ತಸಾಗರದಾಚೆಗೂ ರಾಕೀಭಾಯ್ ಯಶ್ ಸದ್ದು ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್​​ ದರ್ಶನ್ ಅಭಿನಯದ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಇವೆಲ್ಲಾ ಎಲ್ಲರಿಗೂ ಗೊತ್ತಿರುವ ಸಿನಿ ಸುದ್ದಿಯೇ…ಹೊಸ ಸುದ್ದಿ ಏನಂದ್ರೆ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ ಕುಮಾರ್ ಅವರ ಸಿನಿಮಾ ಕೂಡ ಪಂಚ ಭಾಷೆಗಳಲ್ಲಿ ಬರಲಿದೆ..! ಡೈರೆಕ್ಟರ್ ಹರ್ಷ ಮತ್ತು ಶಿವಣ್ಣ ಅಭಿನಯದ ಭಜರಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. 2013ರಲ್ಲಿ ರಿಲೀಸ್ ಆಗಿದ್ದ ಆ ಸಿನಿಮಾ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು. ಇದೀಗ ಹರ್ಷ ಮತ್ತು ಶಿವಣ್ದ ಮತ್ತೆ ಒಂದಾಗಿದ್ದಾರೆ. ಭಜರಂಗಿ -2 ಸಿನಿಮಾ ಸೆಟ್ಟೇರುತ್ತಿದ್ದು, ಪಂಚ ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದಾಗಿದೆ. ಸೆಪ್ಟೆಂಬರ್ 9ರಿಂದ ಚಿತ್ರೀಕರಣ ಶುರುವಾಗುತ್ತಿದೆ.

Exit mobile version