Site icon PowerTV

ನೀವು ಯಾಕ್ರಿ ಸಿಎಂ ಆದ್ರಿ, ನಿಮ್ಗೆ ಧೈರ್ಯನೇ ಇಲ್ವಾ? : ಸಿಎಂ ವಿರುದ್ಧ ಸಿದ್ದರಾಮಯ್ಯ ಗುಡುಗು

ಬೆಂಗಳೂರು : ನೀವು ಯಾಕ್ರಿ ಸಿಎಂ ಆದ್ರಿ, ನಿಮ್ಗೆ ಧೈರ್ಯನೇ ಇಲ್ವಾ ಅಂತ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ಬಿಜೆಪಿ ಸರ್ಕಾರ ಹಾಗೂ ಹೈಕಮಾಂಡ್​ ವಿರುದ್ಧ ಹರಿಹಾಯುತ್ತಲೇ ಬಂದಿರುವ ಅವರು ಇಂದು ಬೆಂಗಳೂರಿನಲ್ಲಿ ಸಿಎಂ ಬಿಎಸ್​ವೈ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ರು.
ಮೊದಲು ವಿಶೇಷ ಅಧಿವೇಶನ ಕರೆಯಿರಿ. ಜನರ ಕಷ್ಟ,ಸಮಸ್ಯೆ ಚರ್ಚೆ ಮಾಡಬೇಕು. ಎಲ್ಲಾ ಸಹಕಾರ ಈ ವಿಚಾರದಲ್ಲಿ ಕೊಡ್ತೇವೆ. ನೀವು ಸುಮ್ಮನಾದ್ರೆ ನಾವು ಸುಮ್ಮನೆ ಕೂರಲ್ಲ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು. ಅಷ್ಟೇ ಅಲ್ಲದೇ, ಮೋದಿ ಎದುರು ಬಿಜೆಪಿ ನಾಯಕರು ಮಾತೇ ಆಡಲ್ಲ. ಎಲ್ಲ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿರ್ತಾರೆ. ಯಡಿಯೂರಪ್ಪ ಅವರೇ, ನಿಮಗೆ ಭಯ ಇದ್ರೆ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ ನಾವು ಮೋದಿ ಎದುರು ಮಾತಾಡ್ತೇವೆ ಎಂದರು. 

Exit mobile version