Site icon PowerTV

ಸಂತ್ರಸ್ತರಿಗೆ ವಿಷ ಕುಡಿಯಲು ಪ್ರಚೋದಿಸಿದ ಲಕ್ಷ್ಮಿ ಹೆಬ್ಬಾಳ್ಕರ್​..!

ಗೋಕಾಕ್​ : ಸಂತ್ರಸ್ತರಿಗೆ ವಿಷ ಕುಡಿಯಲು ಪ್ರಚೋದಿಸುವಂತಾ ಹೇಳಿಕೆ ನೀಡುವ ಮೂಲಕ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಕ್ಷೇತ್ರ ಗೋಕಾಕ್​ನಲ್ಲಿ ಶಾಸಕಿ ನೀಡಿದ ವಿವಾದಾತ್ಮಕ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಸಂತ್ರಸ್ತರಿಗೆ ಸಾಂತ್ವಾನ ಹೇಳಲು ಬಂದ ಶಾಸಕಿ, ‘ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸುವುದಾಗಿ ಹೇಳಿ. ಯಾರಾದರೂ ಸಾಲ ಮರುಪಾವತಿಗೆ ನಿಮ್ಮ ಬಳಿ ಕೇಳಿದ್ರೆ ವಿಷ ಸೇವಿಸುತ್ತೇವೆ ಅನ್ನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಮೇಶ್​ ಜಾರಕಿಹೊಳಿ ಮೇಲಿನ ಸಿಟ್ಟಿಗೆ ಲಕ್ಷ್ಮಿ ಹೆಬ್ಬಾಳ್ಕರ್​ ಹೀಗೆ ಮಾತಾಡಿದ್ರಾ? ಏನೋ..? ಆದರೆ, ಸಂತ್ರಸ್ತರಿಗೆ ಸಾಂತ್ವಾನ ಹೇಳೋದು ಹೀಗಾ? ಅಂತ ಎಲ್ಲೆಡೆ ಟೀಕೆ ಕೇಳಿಬರ್ತಾ ಇದೆ.

Exit mobile version