ವರ್ಲ್ಡ್ಕಪ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟಿ20, ಒಡಿಐ ಸೀರಿಸ್ ಗೆದ್ದಿದ್ದು, 2 ಮ್ಯಾಚ್ ಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲ್ಲಿದೆ.
ಮೊದಲ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ 318ರನ್ಗಳಿಂದ ಗೆದ್ದು ಬೀಗಿದ್ದರೂ ಆಗಸ್ಟ್ 30ರಂದು ನಡೆಯಲಿರುವ 2ನೇ ಟೆಸ್ಟ್ನಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಮುಖ್ಯವಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡುವ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಪಂತ್ ಅವರನ್ನು ಹೊರಗಿಟ್ಟರೆ ವಿಕೆಟ್ ಕೀಪಿಂಗ್ ಜಬಬ್ದಾರಿ ಯಾರಿಗೆ ಅನ್ನೋದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ವೃದ್ಧಿಮಾನ್ ಸಾಹ..!
ಹೌದು ರಿಷಭ್ ಪಂತ್ ಬದಲು ವೃದ್ಧಿಮಾನ್ ಸಾಹ ಅವರನ್ನು ಆಡಿಸುವುದು ಬಹುತೇಕ ಖಚಿತವಾಗಿದೆ. ಪಂತ್ ಟಿ20, ಒಡಿಐ ಹಾಗೂ ಮೊದಲ ಟೆಸ್ಟ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವಿಂಡೀಸ್ ಟೂರ್ಗೂ ಮುನ್ನ ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರೂ ಅವರ ಬ್ಯಾಟ್ನಿಂದ ರನ್ಮಳೆ ಹರಿದಿರಲಿಲ್ಲ. ಈಗ 2ನೇ ಟೆಸ್ಟ್ಗೆ ಅವರನ್ನು ಕೂರಿಸುವ ಸಾಧ್ಯತೆಯೇ ಹೆಚ್ಚು.
ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಂತ್ ಇನ್ನೂ ಚಿಕ್ಕವನು. ಆತನಿಗೆ ಭವಿಷ್ಯವಿದೆ. ಕಲಿಯಲು ಇನ್ನೂ ಸಾಕಷ್ಟಿದೆ. ಕೀಪಿಂಗ್ ಮಾಡುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಎರಡು ಗ್ಲೌಸ್ ಧರಿಸಿ ಎಲ್ಲರೂ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಪಂತ್ಗೆ ಇನ್ನಷ್ಟು ಕಲಿಯಲು ಅವಕಾಶ ನೀಡಿ, 2ನೇ ಟೆಸ್ಟ್ಗೆ ಸಾಹರನ್ನು ಆಡಿಸ್ಬೇಕು ಅಂತ ಹೇಳಿದ್ದಾರೆ.
ಇನ್ನು ಪಂತ್ ಕೈ ಬಿಟ್ಟು ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡರೆ ಕನ್ನಡಿಗ ಕೆ.ಎಲ್ ರಾಹುಲ್ಗೆ ವಿಕೆಟ್ ಕೀಪಿಂಗ್ ಹೊಣೆ ನೀಡಿದರೂ ಅಚ್ಚರಿಯಿಲ್ಲ..!
