ಬೆಂಗಳೂರು : ರಾಜ್ಯ ಸರ್ಕಾರ ವಿಸರ್ಜನೆ ಮಾಡಿ, ಚುನಾವಣೆಗೆ ಹೋಗೋಣ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಿಎಂ ಯಡಿಯೂರಪ್ಪ ಅವರನ್ನು ತಿವಿದಿದ್ದಾರೆ.
ಕಾರಣಗಳು ಏನೇ ಇರಲಿ ಈಗಿನ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ. ನಮ್ಮ ರಾಜ್ಯದ ಜನರು ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬಲ್ಲರು. ನೀವು ಕೂಡ ವರಿಷ್ಠರ ಮುಂದೆ ನಿಲ್ಲುವುದು ತಪ್ಪುತ್ತದೆ. ರಾಜ್ಯ ಸರ್ಕಾರ ವಿಸರ್ಜನೆ ಮಾಡಿ, ಚುನಾವಣೆಗೆ ಹೋಗೋಣ. ಸಿಎಂ,ಸಿಎಂ, ಡಿಸಿಎಂ, ಸಂಪುಟ ರಚನೆ, ಖಾತೆ ಹಂಚಿಕೆಯಲ್ಲೇ ಕಸರತ್ತು. ಇದನ್ನೆಲ್ಲಾ ಗಮನಿಸಿದ್ರೆ ಶಾಸಕರ ಶಕ್ತಿ ಉಡುಗಿ ಹೋಗಿರುವಂತಿದೆ .ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸುತ್ತಿರುವ ಹಾಗೆ ಕಾಣಿಸ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಸಿಎಂ ಯಡಿಯೂರಪ್ಪ ಅವರಿಗೆ ಅವಮಾನ ಆಗುತ್ತಿದೆ . ಅವರಿಗೆ ಆಗುತ್ತಿರುವ ಅನ್ಯಾಯ ನೋಡಲು ನನಗೇ ಆಗುತ್ತಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ಬಿಎಸ್ವೈ ಬಗ್ಗೆ ಅನುಕಂಪ ಮೂಡುತ್ತಿದೆ ಅಂತ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
