Site icon PowerTV

ಮೋದಿ, ಅಮಿತ್ ಶಾ ನೋಡಿ ಬಿಜೆಪಿಗೆ ವೋಟ್ ಹಾಕಿಲ್ಲ..!

ಕೊಪ್ಪಳ : ನಾವು ಮೋದಿ, ಅಮಿತ್ ಶಾ ನೋಡಿ ಬಿಜೆಪಿಗೆ ವೋಟ್ ಹಾಕಿಲ್ಲ. ನಮ್ ಶ್ರೀರಾಮುಲು ಅಣ್ಣನನ್ನು ಉಪ ಮುಖ್ಯಮಂತ್ರಿ ಮಾಡ್ತೀವಿ ಅಂದಿದ್ಕೆ ವೋಟ್ ಹಾಕಿದ್ವಿ ಎಂದು ಕೊಪ್ಪಳದಲ್ಲಿ ಶ್ರೀರಾಮುಲು ಅಭಿಮಾನಿ ಬಳಗ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಚುನಾವಣೆಗೂ ಮುಂಚೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಎಂದು ಹೇಳಿದ ಬಿಜೆಪಿ ನಾಯಕರು ಇದೀಗ ಅವರಿಗೆ ಡಿಸಿಎಂ ಪಟ್ಟ ಕಟ್ಟಿಲ್ಲ ಅಂತ ಕೊಪ್ಪಳದ ಕನಕಗಿರಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿಯೂ ಶ್ರೀರಾಮುಲು ಅಭಿಮಾನಿಗಳು ಬಿಜೆಪಿ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಶ್ರೀರಾಮುಲು ಇಲ್ಲದೆ ನಿಮ್ಮ ಪಕ್ಷ ಕಟ್ಟಿನೋಡಿ ಎಂದು ಚಾಲೆಂಜ್ ಮಾಡಿದ್ದಾರೆ.
ವಿವಿಧ ವಾಟ್ಸ್​ಆ್ಯಪ್​​ ಗ್ರೂಪಗಳಲ್ಲಿ ಮೋದಿ, ಅಮೀತ್ ಶಾ ಸೇರಿ ಅನೇಕ ನಾಯಕರ ವಿರುದ್ಧವೂ ಕಿಡಿಕಾರುತ್ತಿದ್ದಾರೆ. ವಾಲ್ಮಿಕಿ, ನಾಯಕ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಕನಕಗಿರಿಯಲ್ಲಿ ಟೈರ್ ಗೆ‌ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಗಿದೆ. ಶ್ರೀರಾಮುಲು ಡಿಸಿಎಂ ಆಗ್ಬೇಕು, ವಾಲ್ಮೀಕಿ ನಾಯಕ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡ್ಬೇಕು ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೇ ರಾಜ್ಯಾದ್ಯಂತ ಹೋರಾಟ‌ ಮಾಡುವುದಾಗಿ ಬಿಜೆಪಿ ಸರ್ಕಾರಕ್ಕೆ‌ ವಾಲ್ಮಿಕಿ ಸಮುದಾಯ ನಾಯಕರುಗಳು ಎಚ್ಚರಿಕೆ ನೀಡಿದ್ದಾರೆ.‌ಅಷ್ಟೇ ಅಲ್ಲದೆ ಈ ಭಾಗದಲ್ಲಿ ಬಿಜೆಪಿಯನ್ನು ಶೂನ್ಯದ ಸ್ಥಿತಿಗೆ ತರ್ತಿವೆ ಎಂದು ಮುನ್ನೆಚರಿಕೆ ನಿಡಿದ್ದಾರೆ.

Exit mobile version