Site icon PowerTV

ಹಳೆಯ ಕಲಾವಿದರನ್ನು ಮರೆಯಬೇಡ ಅಂತ ದರ್ಶನ್​ಗೆ ಹೇಳಿದ್ದೇಕೆ ಜಗ್ಗೇಶ್..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್​ ಮಾತ್ರವಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಸುಪ್ರೀಂ ಹೀರೋ ಶಶಿಕುಮಾರ್​, ಆ್ಯಕ್ಷನ್ ಕಿಂಗ್ ಅರ್ಜುನ್​ ಸರ್ಜಾ, ಸ್ಯಾಂಡಲ್​ವುಡ್ ಯುವರಾಜ ನಿಖಿಲ್​ ಕುಮಾರ ಸ್ವಾಮಿ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಈ ಸಿನಿಮಾಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಾ ಇದೆ.
ಅಂತೆಯೇ ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ. ದರ್ಶನ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೆಯಿಂದ ನಿನ್ನ ಭುಜದ ಮೇಲೆ ಶಾಶ್ವತವಾಗಿ ಉಳಿಯಲಿ ಅಂತ ಜಗ್ಗೇಶ್ ದರ್ಶನ್​ಗೆ ಹಾರೈಸಿದ್ದಾರೆ.
”ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೆಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರ ತುಂಬಿಸುವ ಕಾರ್ಯಮಾಡು ಎಂದು ವಿನಂತಿ. ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless..” ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Exit mobile version