Site icon PowerTV

‘ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ’ ಪ್ರಮಾಣವಚನ ಸ್ವೀಕರಿಸಿದ ಮಾಧುಸ್ವಾಮಿ..!

ಬೆಂಗಳೂರು : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಸಿ ಮಾಧುಸ್ವಾಮಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..! ಇದೇನು ದಿಢೀರ್ ಬೆಳವಣಿಗೆ..? ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಮಾಧುಸ್ವಾಮಿಯವ್ರು ಮುಖ್ಯಮಂತ್ರಿಯಾಗಿ ಬಿಟ್ರಾ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ..? ಅಲ್ಲ… ವಿಷಯ ಬೇರೇನೇ ಇದೆ..!
ಇಂದು ರಾಜಭವನದಲ್ಲಿ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ 17 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು. ಅದರಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ ಮಾಧುಸ್ವಾಮಿ ಕೂಡ ಒಬ್ರು..! ಪ್ರಮಾಣ ವಚನ ಸ್ವೀಕರಿಸಲು ಲವಲವಿಕೆಯಿಂದ ಬಂದ ಮಾಧುಸ್ವಾಮಿ ಜೋಷ್​ನಲ್ಲಿ ಮಂತ್ರಿಯಾಗಿ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಅಂತ ಹೇಳಿದ್ರು.. ಆಗ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅಲ್ಲಿದ್ದವರ ಮೊಗದಲ್ಲಿ ಮುಗುಳು ನಗೆ ಅರಳಿತು.. ಕೂಡಲೇ ತಮ್ಮ ಮಾತನ್ನು ತಿದ್ದಿದ್ದ ಮಾಧುಸ್ವಾಮಿ ಸಾರಿ.. ಮಂತ್ರಿಯಾಗಿ ಅಂತ ಪ್ರಮಾಣ ವಚನ ಸ್ವೀಕರಿಸಿ ಮುಗುಳ್ನಕ್ಕರು.
”ಜೆ.ಸಿ ಮಾಧುಸ್ವಾಮಿ ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ.., ಸಾರಿ ಮಂತ್ರಿಯಾಗಿ ನನ್ನ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ” ಅಂತ ಮಾಧುಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದು ನೆರದವರ ಮುಖದಲ್ಲಿ ನಗು ತಂದಿತ್ತು.

Exit mobile version