ಬೆಂಗಳೂರು : ಬಿ.ಎಸ್ ಯಡಿಯೂರಪ್ಪರವರ ಸಚಿವ ಸಂಪುಟದ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಎಸ್ವೈ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಏರಿದ 25 ದಿನಗಳ ಬಳಿಕ ಕೊನೆಗೂ ಸಚಿವ ಸಂಪುಟ ರಚನೆಯಾಗಿದ್ದು, 17 ಮಂದಿ ಸಚಿವರು ರಾಜಭವನದಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ 17 ಮಂದಿ ಶಾಸಕರು ಯಾರ‍್ಯಾರು?
ಲಕ್ಷಣ್ ಸವದಿ
ಶಶಿಕಲಾ ಜೊಲ್ಲೆ (ನಿಪ್ಪಾಣಿ ಕ್ಷೇತ್ರದ ಶಾಸಕಿ)
ಜೆ.ಸಿ ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ)
ಅಶ್ವತ್ಥ್ ನಾರಾಯಣ್ (ಮಲ್ಲೇಶ್ವರ ಕ್ಷೇತ್ರದ ಶಾಸಕ)
ಸುರೇಶ್ ಕುಮಾರ್ ( ರಾಜಾಜಿನಗರ ಕ್ಷೇತ್ರದ ಶಾಸಕ)
ಈಶ್ವರಪ್ಪ (ಶಿವಮೊಗ್ಗ ನಗರ ಕ್ಷೇತ್ರದ ಶಾಸಕ)
ಗೋವಿಂದ ಕಾರಜೋಳ (ಮುಧೋಳ ಕ್ಷೇತ್ರದ ಶಾಸಕ)
ಆರ್.ಅಶೋಕ್ (ಪದ್ಮನಾಭನಗರ ಕ್ಷೇತ್ರದ ಶಾಸಕ)
ಬಸವರಾಜ್ ಬೊಮ್ಮಾಯಿ (ಶಿಗ್ಗಾಂವ್ ಕ್ಷೇತ್ರದ ಶಾಸಕ)
ಚಂದ್ರಕಾಂತಗೌಡ ಪಾಟೀಲ್ (ನರಗುಂದ ಕ್ಷೇತ್ರದ ಶಾಸಕ)
ಪ್ರಭು ಚೌಹಾಣ್ (ಔರಾದ್ ಕ್ಷೇತ್ರದ ಶಾಸಕ)
ಕೋಟ ಶ್ರೀನಿವಾಸ್ ಪೂಜಾರಿ (ವಿಧಾನ ಪರಿಷತ್ ಸದಸ್ಯ)
ಸಿ.ಟಿ.ರವಿ (ಚಿಕ್ಕಮಗಳೂರು ಕ್ಷೇತ್ರದ ಶಾಸಕ)
ನಾಗೇಶ್ (ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ)
ಜಗದೀಶ್ ಶೆಟ್ಟರ್ (ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ)
ವಿ. ಸೋಮಣ್ಣ (ಗೋವಿಂದರಾಜ ನಗರ ಕ್ಷೇತ್ರದ ಶಾಸಕ)
ಶ್ರೀರಾಮುಲು (ಮೊಳಕಾಲ್ಮೂರು ಕ್ಷೇತ್ರದ ಶಾಸಕ)
