ವಿರಾಟ್ ಕೊಹ್ಲಿ… ಟೀಮ್ ಇಂಡಿಯಾದ ಸಾರಥಿ…ವಿಶ್ವ ಕ್ರಿಕೆಟ್ನ ರನ್ಮಷಿನ್… ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ಯಂಗ್ ಕ್ರಿಕೆಟರ್. ಇವರೀಗ 11 ವರ್ಷದ ಹಿಂದಿನ ಈ ದಿನವನ್ನು ನೆನೆದಿದ್ದಾರೆ..! ಅಷ್ಟಕ್ಕೂ ವಿರಾಟ್ ಕೊಹ್ಲಿ ಆ ದಿನವನ್ನು ಸ್ಮರಿಸಿಕೊಂಡಿದ್ದೇಕೆ ಅಂತೀರಾ..? ಮುಂದಕ್ಕೆ ಓದಿ..
ಅದು 2008ರ ಆಗಸ್ಟ್ 18… ದೆಹಲಿಯ ಯುವ ಆಟಗಾರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಎಂಟ್ರಿಕೊಟ್ಟ ದಿನವದು. ಶ್ರೀಲಂಕಾ ವಿರುದ್ಧ ನಡೆದ ಒಡಿಐನಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ರು. ಅಂದಿನಿಂದ ಇಂದಿನವರೆಗೆ ನಡೆದಿರುವುದೆಲ್ಲವೂ ಇತಿಹಾಸ..! ಅಂದು ತಂಡದಲ್ಲಿ ಸ್ಥಾನ ಪಡೆದಿದ್ದ ವಿರಾಟ್ ಇಂದು ತಂಡದ ನಾಯಕ..!
ತಾವು ಟೀಮ್ ಇಂಡಿಯಾ ಪರ ಆಡಿದ ಮೊದಲ ಮ್ಯಾಚನ್ನು ನೆನೆದಿರುವ ಕೊಹ್ಲಿ, ‘ಟೀನೇಜರ್ ಆಗಿ 2008ರಲ್ಲಿ ಶುರುವಾಗಿದ್ದ ನನ್ನ ಪಯಣಕ್ಕೀಗ 11 ವರ್ಷ..! ದೇವ್ರು ನಂಗೆ ಕರುಣಿಸಿರೋ ಈ ಯಶಸ್ಸಿನ ಬಗ್ಗೆ ನಾನೆಂದೂ ಕನಸು ಕಂಡಿರ್ಲಿಲ್ಲ. ನಿಮ್ಗೂ ಕೂಡ ನಿಮ್ಮ ಕನಸುಗನ್ನು ಬೆನ್ನಟ್ಟುವ ಶಕ್ತಿ, ಸಾಮಾರ್ಥ್ಯ ಸಿಗ್ಲಿ. ಯಾವಾಗ್ಲೂ ಸರಿಯಾದ ಮಾರ್ಗವನ್ನೇ ಅನುಸರಿಸಿ” ಅಂತ ಟ್ವೀಟ್ ಮಾಡಿದ್ದಾರೆ.
