Site icon PowerTV

ಕನ್ನಡದಲ್ಲೂ ಬರ್ತಿದೆ ಸೈರಾ ನರಸಿಂಹ ರೆಡ್ಡಿ..!

ಡಬ್ಬಿಂಗ್ ವಿಚಾರಕ್ಕೆ ಸ್ಯಾಂಡಲ್​ವುಡ್​ನಲ್ಲಿ ಪರ-ವಿರೋಧದ ಚರ್ಚೆಗಳಾಗ್ತಿವೆ. ಈ ನಡುವೆ ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲೂ ಬರಲಿದೆ ಅನ್ನೋ ಸುದ್ದಿ ಬಂದಿದೆ.
ತೆಲುಗಿನಲ್ಲಿ ನಿರ್ಮಾಣವಾಗ್ತಿರೋ ಸೈರಾ ಹಿಂದಿ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡದಲ್ಲಿ ತೆರೆ ಕಾಣುವ ಬಗ್ಗೆ ಗೊಂದಲವಿತ್ತು. ಈಗ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದ್ದು, ಪ್ರಸಿದ್ಧ ಚಾನಲ್ಲೊಂದು ಈಗಾಗಲೇ ಕನ್ನಡದ ಟಿವಿ ಹಕ್ಕನ್ನು ಖರೀದಿಸಿದೆ ಎಂದು ತಿಳಿದುಬಂದಿದೆ. ಇದೇ ತಿಂಗಳು 20ಕ್ಕೆ ಟ್ರೈಲರ್ ರಿಲೀಸ್ ಆಗಲಿದ್ದು, ಆ ದಿನ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಬೀಳಲಿದೆ.
ಇನ್ನು ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಮಿತಾಭ್​ ಬಚ್ಚನ್​, ವಿಜಯ್ ಸೇತುಪತಿ, ತಮನ್ನಾ, ನಯನಾತಾರ , ಜಗಪತಿ ಬಾಬು ಮತ್ತಿತರರು ನಟಿಸಿದ್ದಾರೆ.

Exit mobile version