Site icon PowerTV

ಕೆಂಪುಕೋಟೆ ಮೇಲೆ ರಾರಾಜಿಸಿದ ತಿರಂಗ

ಇಂದು  ದೇಶದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು  ಸಂಭ್ರಮ ಸಡಗರದಿಂದ  ಆಚರಣೆ ಮಾಡಲಾಗುತ್ತಿದೆ.

ಎರಡನೇ ಅವಧಿ ಸರ್ಕಾರ ರಚಿಸಿದ ಬಳಿಕ  ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ  ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಒಂದು ದೇಶ ಒಂದು ಸಂವಿಧಾನ ಎಂದ ಘೋಷಣೆಯನ್ನು ಮಾಡಿದರು. ಜಮ್ಮು-ಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿದ ಪ್ರಧಾನಿ ಮೋದಿ ‘’ಉಗ್ರರ ದಮನಕ್ಕೆ ಕೇಂದ್ರ ಕಠಿಣ ನಿರ್ಧಾರ ತೆಗೆದುಕೊಂಡಿದೆ ಬಾಲ್ಯವಿವಾಹ, ತ್ರಿವಳಿ ತಲಾಖ್‌ ಬಗ್ಗೆ ಧ್ವನಿ ಎತ್ತಿದ್ದೇವೆ ರೈತರಿಗಾಗಿ ಕಿಸಾನ್‌ ಸಮ್ಮಾನ್ ಯೋಜನೆ ಜಾರಿಗೆ ಮಾಡಲಾಗಿದೆ. ಎಂದು ಹೇಳಿದರು.

ಇನ್ನು ಇಂದು ರಕ್ಷಾಬಂದನ ಇರುವ ಕಾರಣ ಪ್ರಧಾನಿ ಮೋದಿಗೆ ರಾಕಿ ಕಟ್ಟಲು ತ್ರಿವಳಿ ತಲಾಖ್‌ ಹೋರಾಟದ ಮುಂಚೂಣಿಯಲ್ಲಿದ್ದ ಇಶ್ರತ್‌ ಜಹಾನ್‌ ಎಂಬ ಮಹಿಳೆಗೆ  ಅವಕಾಶ ಮಾಡಿಕೊಡಲಾಗಿದೆ.  

Exit mobile version