Site icon PowerTV

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ತಾರಾ, ಸುಧಾರಾಣಿ..!

ಬೆಂಗಳೂರು: ಭೀಕರ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನ್ರಿಗಾಗಿ ಸ್ಯಾಂಡಲ್​ವುಡ್​​ ನಟಿಯರ ಮನ ಮಿಡಿದಿದೆ. ಪ್ರವಾಹದಿಂದ ಮನೆ ಮಠಗಳನ್ನು ಕಳೆದುಕೊಂಡಿರೋ ಜನ್ರಿಗಾಗಿ ಕನ್ನಡದ ಹಿರಿಯ ನಟಿಯರಾದ ತಾರಾ ಹಾಗೂ ಸುಧಾರಾಣಿಯವ್ರು ವೈಯಕ್ತಿಕವಾಗಿ 1 ಲಕ್ಷ ರೂಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ, ನಿಧಿ ಸಂಗ್ರಹವನ್ನೂ ಮಾಡಿದ್ದಾರೆ.
ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನ ಸಹಾಯ ನೀಡಿರುವ ತಾರಾ ಹಾಗೂ ಸುಧಾರಾಣಿಯವ್ರು ಕಾಕ್ಸ್‌ಟೌನ್‌, ಭಾರತಿನಗರ ಸೇರಿದಂತೆ ಹಲವೆಡೆ ಹಣ ಸಂಗ್ರಹಿಸಿದ್ದಾರೆ. ಎಲ್ಲಾ ಸಹಾಯ ಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಕಲಿದ್ದಾರೆ. 

Exit mobile version