ಗಯಾನ : ವರ್ಲ್ಡ್ಕಪ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 3 ಮ್ಯಾಚ್ಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಒಡಿಐಗೆ ಅಣಿಯಾಗಿದೆ. ಮೂರು ಮ್ಯಾಚ್ಗಳ ಒಡಿಐ ಸೀರಿಸ್ಗೆ ಇಂದು ಚಾಲನೆ ಸಿಗ್ತಿದ್ದು, ವೆಸ್ಟ್ ಇಂಡೀಸ್ ಟಿ20 ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.
ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಇಂದು ಫಸ್ಟ್ ಒಡಿಐ ನಡೆಯಲಿದ್ದು, ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಆರಂಭಿಸುವುದು ಖಚಿತವೇ. ಆದರೆ, ಟಿ20ಯಲ್ಲಿ ಮೂರೂ ಮ್ಯಾಚ್ಗಳಲ್ಲಿ ಫೇಲ್ಯೂರ್ ಆಗಿರುವ ಧವನ್ ಅವರನ್ನು ಅಕಸ್ಮಾರ್ ಹೊರಗಿಟ್ಟರೆ ವಿಶ್ವಕಪ್ನಂತೆ ಇಲ್ಲಿಯೂ ಕನ್ನಡಿಗ ಕೆ.ಎಲ್ ರಾಹುಲ್ ಹೆಗಲಿಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡಲಾಗುತ್ತದೆ. ಮೂರನೇ ಕ್ರಮಾಂಕಕ್ಕೆ ಕ್ಯಾಪ್ಟನ್ ಕೊಹ್ಲಿ ಫಿಕ್ಸ್. ಶಿಖರ್ ಧವನ್ ತಂಡದಲ್ಲಿದ್ದರೆ ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಆಡಲಿದ್ದಾರೆ. ಇಲ್ಲವೇ ಇನ್ನೋರ್ವ ಕನ್ನಡಿಗ ಮನೀಷ್ ಪಾಂಡೆ ಆಡಲಿದ್ದಾರೆ. 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಲಿದ್ದಾರೆ. ಕೊನೆಯ ಟಿ20ಯಲ್ಲಿ ಫಾರ್ಮ್ ಗೆ ಮರಳಿರುವ ಪಂತ್ ಏಕದಿನದಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಭುನೇಶ್ವರ್ ಕುಮಾರ್ ಆಡುವ 11ರ ಬಳಗದಲ್ಲಿರುವುದು ಕನ್ಫರ್ಮ್.
ಗೇಲ್ ಭಾರತದೆದುರಿನ ಸರಣಿ ಬಳಿಕ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಒಡಿಐಯನ್ನು ಗೆದ್ದು ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ಗೆ ವಿದಾಯದ ಉಡುಗೊರೆ ನೀಡಬೇಕೆಂದಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7ಗಂಟೆಗೆ ಪಂದ್ಯ ಆರಂಭವಾಗಲಿದೆ.
ಇಂಡೋ-ವಿಂಡೀಸ್ ಒಡಿಐ ಫೈಟ್ – ಟಿ20 ಸೋಲಿಗೆ ಸೇಡು ತೀರಿಸಿಕೊಳ್ಳೋ ತವಕದಲ್ಲಿ ಕೆರಬಿಯನ್ನರು..!
TRENDING ARTICLES


