ಇನ್ನೂ ಎರಡು ದಿನ ನಿಲ್ಲಲ್ಲ ವರುಣನ ರುದ್ರ ನರ್ತನ..!

ಬೆಂಗಳೂರು: ವ್ಯಾಪಕ ಮಳೆಗೆ ಕರುನಾಡು ಈಗಾಗಲೇ ತತ್ತರಿಸಿ ಹೋಗಿದೆ. ನಾಡಿನ ಬಹತೇಕ ಜಲ್ಲೆಗಳ ಜನ್ರು ವರುಣನ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ. ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರೋ ಜನ್ರು ಒಮ್ಮೆ ಮಳೆ ನಿಂತ್ರೆ ಸಾಕು ಅಂತ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ಆದ್ರೆ ಸದ್ಯಕ್ಕಂತು ಈ ಪ್ರಾರ್ಥನೆ ಫಲಿಸುವ ಲಕ್ಷಣ ಕಂಡುಬರ್ತಿಲ್ಲ..! ಇದಕ್ಕೆ ಕಾರಣ ಹವಮಾನ ಇಲಾಖೆ ನೀಡಿರೋ ಮುನ್ಸೂಚನೆ..!
ಹೌದು, ಕರುನಾಡಿನಲ್ಲಿ ವರುಣನ ಆರ್ಭಟ ಮುಂದುವರಿಯಲಿದ್ದು ಇನ್ನೂ 2 ದಿನ ಕರ್ನಾಟಕದಲ್ಲಿ ಮಳೆರಾಯನ ರುದ್ರ ನರ್ತನ ನಡೆಯಲಿದೆ ಎಂಬ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆ ಆಗಲಿದೆ ಅಂತ ಹವಮಾನ ಇಲಾಖೆ ತಿಳಿಸಿದೆ.

RELATED ARTICLES

Related Articles

TRENDING ARTICLES