Site icon PowerTV

ಉತ್ತರ ಕರ್ನಾಟಕಕ್ಕಾಗಿ ಸುದೀಪ್ -ದರ್ಶನ್ ಕರೆ..!

ಬೆಂಗಳೂರು: ಅತೀವೃಷ್ಟಿಯಿಂದ ಉತ್ತರಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಮಾತ್ರವಲ್ಲದೇ ಅಪಾರ ಪ್ರಮಾಣದ ನಷ್ಟಗಳು ಸಂಭವಿಸುತ್ತಿವೆ. ಉತ್ತರಕರ್ನಾಟಕದ ಅನೇಕ ಜನ ತಮ್ಮ ಮನೆಮಠಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಉತ್ತರ ಕರ್ನಾಟಕಕ್ಕೆ ನೆರವಾಗುವಂತೆ ಸ್ಯಾಂಡಲ್​ವುಡ್​ ಸ್ಟಾರ್​ ನಟರಾದ ಕಿಚ್ಚ ಸುದೀಪ್​ ಹಾಗೂ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​ ಮನವಿ ಮಾಡಿದ್ದಾರೆ.
ಸೆಲ್ಫಿ ವಿಡಿಯೋ ಮೂಲಕ ಸುದೀಪ್​​, ಉತ್ತರ ಕರ್ನಾಟಕದ ಜನಕ್ಕೆ ನೆರವಾಗಬೇಕೆಂದು ತಮ್ಮ ಅಭಿಮಾನಿಗಳಿಗೆ ಮತ್ತು ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ. ತನ್ನ ಗಮನಕ್ಕೂ ತನ್ನಿ, ಎಲ್ಲರೂ ಸೇರಿ ನೆರವಾಗೋಣ ಅಂತ ಕರೆ ನೀಡಿರುವ ಸುದೀಪ್, ನೆರೆ ಪೀಡಿತ ಪ್ರದೇಶಗಳ ಪರಿಸ್ಥಿತಿ ಅರಿತು ಸ್ವತಃ ನೆರವಾಗುತ್ತೇನೆ ಎಂದು ಭರವಸೆಯನ್ನೂ ನೀಡಿದ್ದಾರೆ.
ಇನ್ನು ದರ್ಶನ್​ ಕೂಡ ​ ಕೈಲಾದ ಸೇವೆಯನ್ನು ಮಾಡುವಂತೆ ಟ್ವೀಟ್​ ಮೂಲಕ ಕೇಳಿಕೊಂಡಿದ್ದಾರೆ. ಹಲವು ಗ್ರಾಮಗಳು ಪ್ರವಾಹದಿಂದ ನೀರಿನಲ್ಲಿ ಮುಳುಗಿ ಹೋಗಿವೆ . ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉತ್ತರ ಕರ್ನಾಟಕದ ಜನತೆಗೆ ನೆರವಾಗಲು ‘ಯಜಮಾನ’ ದರ್ಶನ್ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

Exit mobile version