Site icon PowerTV

ನೆರೆ ವೀಕ್ಷಣೆಗೆ ಸಿಎಂ ಬಿಎಸ್​ವೈ ಪ್ರಯಾಣ

ಬೆಂಗಳೂರು :  ಮಹಾರಾಷ್ಟ್ರದಿಂದ 2.3 ಲಕ್ಷ ಕ್ಯೂಸೆಕ್​​ ನೀರು ಬಿಡುಗಡೆ ಮಾಡಿರುವುದರಿಂದ ಉ.ಕದಲ್ಲಿ 37ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಇದರ ಹಿನ್ನಲೆಯಲ್ಲಿ  ಸಿಎಂ ಯಡಿಯೂರಪ್ಪ ಉ.ಕ ಪ್ರವಾಸ ಕೈಗೊಂಡಿದ್ದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ‘’ರಾಜ್ಯದ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ, ಪ್ರತ್ಯಕ್ಷವಾಗಿ ವೈಮಾನಿಕ ಸಮೀಕ್ಷೆ ನಡೆಸಲು ತೆರಳುತ್ತಿದ್ದೇನೆ. ಈಗಾಗಲೆ ನಮ್ಮ ಅಧಿಕಾರಿಗಳು ಅಲ್ಲಿನ ಜನರ ರಕ್ಷಣಕಾರ್ಯದಲ್ಲಿ ತೊಡಗಿದ್ಧಾರೆ.  ಇಂದು ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿಯ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ಸೌಲಭ್ಯದ ಅವಶ್ಯಕತೆ ಇದ್ದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇನೆ’’  ಎಂದು ಹೇಳಿದರು. 

Exit mobile version