Site icon PowerTV

ದೇವೇಗೌಡರೇ ನನ್ನ ಕ್ಷಮಿಸಿ ಅಂದ್ರು ವಿಶ್ವನಾಥ್..!

ಮೈಸೂರು : ಮೈತ್ರಿ ಸರ್ಕಾರದ ಪತನಕ್ಕೆ ರಾಜೀನಾಮೆ ನೀಡಿದ ಶಾಸಕರಾಗಲಿ ಅಥವಾ ಬಿಜೆಪಿಯವರಗಾಲಿ ಕಾರಣವಲ್ಲ… ಆ ಸರ್ಕಾರದ ನಾಯಕರೇ ಕಾರಣ ಅಂತ ಗುಡುಗಿದ ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಹೆಚ್​.ವಿಶ್ವನಾಥ್ ಹೆಚ್​.ಡಿ ದೇವೇಗೌಡರ ಬಳಿ ಕ್ಷಮೆಯನ್ನೂ ಕೇಳಿದರು..!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಯಕರೇ ಕಾರಣ ಹೊರತು ಮತ್ಯಾರು ಅಲ್ಲ. ಸರ್ಕಾರ ಪತನಕ್ಕೆ, ಹೊಸ ಸರ್ಕಾರ ಸ್ಥಾಪನೆಗೆ ರಾಜೀನಾಮೆ ನೀಡಿದ 20 ಶಾಸಕರು ಕಾರಣವಲ್ಲ. ಹಾಗೆಯೇ ಬಿಜೆಪಿ ಕೂಡ ಹೊಣೆಯಲ್ಲ. ಮೈತ್ರಿ ಪಕ್ಷದ ನಾಯಕರೇ ಕಾರಣ ಎಂದರು.
ಕಾಂಗ್ರೆಸ್-ಜೆಡಿಎಸ್​ ನಾಯಕರು ತಮ್ಮ ತಮ್ಮ ಪಕ್ಷದ ಶಾಸಕರಿಗೆ ಗೌರವ ನೀಡಲಿಲ್ಲ. ಹೀಗಾಗಿ ಸರ್ಕಾರಕ್ಕೆ ಅವರೇ ನೇರ ಹೊಣೆ ಎಂದರು. ತಾನು ರಾಜೀನಾಮೆ ನೀಡಿದ್ದಕ್ಕೆ ಹುಣಸೂರಿನ ಮತದಾರರಲ್ಲಿ ಕ್ಷಮೆ ಕೇಳುತ್ತೇನೆ. ರಾಜೀನಾಮೆ ನೀಡುವ ಸನ್ನಿವೇಶ ನಿರ್ಮಾಣವಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ ಅಂತ ಹೇಳಿದರು.
ಅಂತೆಯೇ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ ದೇವೇಗೌಡರ ಬಳಿ ಕ್ಷಮೆ ಯಾಚಿಸಿದ್ದಾರೆ. ದೇವೇಗೌಡರು ನಂಗೆ ಕರೆದು ಅವಕಾಶಕೊಟ್ಟರು. ಜೆಡಿಎಸ್​​ ರಾಜ್ಯಘಟಕದ ಅಧ್ಯಕ್ಷರನ್ನಾಗಿ ಮಾಡಿದ್ರು. ಆದರೆ ಪರಿಸ್ಥಿತಿ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ದೇವೇಗೌಡರ ಫೋಟೋನಾ ಮನೆಯಲ್ಲಿಟ್ಟು ಪೂಜೆ ಮಾಡ್ತೇನೆ ಎಂದರು.

Exit mobile version