Site icon PowerTV

ಅಷ್ಟಕ್ಕೂ ಪ್ರೆಸ್​ಮೀಟ್​ನಲ್ಲಿ ದೇವೇಗೌಡ್ರು ಕಣ್ಣೀರಿಟ್ಟಿದ್ದೇಕೆ?

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು ಕಣ್ಣೀರಿಟ್ಟಿದ್ದಾರೆ..! ಸುದ್ದಿಗೋಷ್ಠಿಯಲ್ಲಿ ಗೌಡ್ರು ಭಾವುಕರಾಗಿ ಮಾತಾಡಿದ್ದಾರೆ. ಅಷ್ಟಕ್ಕೂ ದೇವೇಗೌಡ್ರು ಕಣ್ಣೀರಾಕಿದ್ದೇಕೆ ಗೊತ್ತಾ?
ಹೌದು, ಇಂದು ಗೌಡ್ರು ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದೇನೆ. ಅವ್ರಲ್ಲಿ ಕ್ಷಮೆ ಕೇಳ್ತೀನಿ ಅಂತ ಕಣ್ಣೀರಿಟ್ರು.
ಕಾರ್ಯಕರ್ತರು ಕಷ್ಟದಲ್ಲಿ ಭಾಗಿಯಾಗಿದ್ದಾರೆ. ಆಗಸ್ಟ್ 7ರಂದು ಅರಮನೆ ಮೈದಾನದಲ್ಲಿ ನಡೆಯುವ ಜೆಡಿಎಸ್​ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪಾಲ್ಗೊಳ್ಳ ಬೇಕು ಅಂತ ಆಹ್ವಾನಿಸಿದ್ರು.
ನಾಳೆ ಅತೃಪ್ತರು ಮುಂಬೈನಿಂದ ಬಂದು ಮಾತಾಡ್ತಾರೆ. ನಮ್ ಮೇಲೆ ಯಾವ ಆರೋಪ ಮಾಡ್ತಾರೆ ಅನ್ನೋದನ್ನು ನೋಡ್ಬೇಕು. ಅತೃಪ್ತರು ಬಂದು ಏನೇನ್ ಮಾತಾಡ್ತಾರೆ ನೋಡ್ತೀವಿ ಅಂತ ಹೇಳಿದ್ರು.

Exit mobile version