Site icon PowerTV

ಹೆಚ್​.ಡಿ ಕುಮಾರಸ್ವಾಮಿ ಗಳಗಳನೆ ಅತ್ತಿದ್ದರಂತೆ..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಹಳ ನೋವಿನಿಂದ ಅತ್ತಿದ್ದರಂತೆ. ಇದನ್ನು ಯಾರೋ ಮೂರನೇಯವರು ಹೇಳಿದ್ದಲ್ಲ. ಹೆಚ್​ಡಿಕೆಯವರ ತಂದೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರೇ ಈ ವಿಷಯವನ್ನು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ್ರು, ‘ಸಿಎಂ ಆಗಿ ಕುಮಾರಸ್ವಾಮಿ ಎಷ್ಟು ನೋವು ತಿಂದಿದ್ದಾರೆ. ಜೆಪಿ ಭವನದಲ್ಲೇ ಅವರು 15 ನಿಮಿಷ ಕಣ್ಣೀರು ಹಾಕಿದ್ದಾರೆ. ಎಷ್ಟು ಕಷ್ಟಪಟ್ಟಿದ್ದಾರೆ ಎಲ್ಲಾ ನನಗೆ ಗೊತ್ತಿದೆ’ ಎಂದರು.
ಸರ್ಕಾರ ಹೋದ್ರೂ ಚಿಂತೆಯಿಲ್ಲ, 30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡ್ತೀನಿ. ದ್ವೇಷ ಇಲ್ಲದೇ ಕೆಲಸ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ನಮ್ಮವರಿಗೆ ಪರಿಣಾಮಕಾರಿಯಾಗಿ ವಿರೋಧ ಪಕ್ಷದ ಕೆಲಸ ಮಾಡಲು ಸೂಚಿಸಿದ್ದೇನೆ ಅಂತ ತಿಳಿಸಿದ್ರು.
ಬಿ.ಎಸ್​. ಯಡಿಯೂರಪ್ಪ ಸಿಎಂ ಆಗಿರುವುದನ್ನು ಸ್ವಾಗತಿಸುತ್ತೇನೆ. ಅವರ ವಿರುದ್ಧ ನಾನೇಕೆ ಸಿಡುಕಬೇಕು.? ಯಡಿಯೂರಪ್ಪ ರಾಜ್ಯಕ್ಕೆ ಒಳಿತು ಮಾಡಿದರೆ ನಮ್ಮ ಪಕ್ಷವೂ ಬೆಂಬಲಿಸುತ್ತೆ ಅಂತ ಹೇಳಿದ್ರು. ಈ ಹೇಳಿಕೆ ಗೌಡ್ರು ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವ ಮಾತಾಡಿದ್ರಾ ಅನ್ನೋ ಚರ್ಚೆಗೆ ಕಾರಣವಾಗಿದೆ.

Exit mobile version