ಬೆಂಗಳೂರು : ಮೈತ್ರಿ ಗೇಮ್ಪ್ಲಾನ್ ಮೂರನೇ ದಿನದ ಕಲಾಪದಲ್ಲೂ ಸಕ್ಸಸ್ ಆಗಿದೆ. ವಿಶ್ವಾಸ ಮತಯಾಚನೆ ಮತ್ತೆ ಮುಂದೂಡಲ್ಪಟ್ಟಿದೆ.
ಗುರುವಾರ ಮತ್ತು ಶುಕ್ರವಾರದಂತೆಯೇ ಇಂದೂ (ಸೋಮವಾರ) ಕೂಡ ದೋಸ್ತಿಗಳು ವಿಶ್ವಾಸ ಮತಯಾಚನೆ ಬದಲು ಕಾಲಹರಣಕ್ಕೆ ಆದ್ಯತೆ ನೀಡಿದರು. ರಾತ್ರಿ 11.45ರವರೆಗೆ ಪಟ್ಟು ಸಡಿಲಿಸದೇ ವಿಶ್ವಾಸ ಮತಯಾಚನೆ ಮುಂದೂಡುವಂತೆ ನೋಡಿಕೊಂಡ್ರು. ಬಿಜೆಪಿ ಶಾಸಕರ ಆಗ್ರಹ, ಸ್ಪೀಕರ್ ಖಡಕ್ ಮಾತುಗಳಿಗೂ ಜಗ್ಗದ ದೋಸ್ತಿ ಹಠ ಸಾಧಿಸಿತು.
ಇಂದಿನ ಕಲಾಪದ ಕೊನೆಯ ಹಂತದಲ್ಲಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ ನಾಳೆ (ಮಂಗಳವಾರ) ರಾತ್ರಿ 8ಗಂಟೆಯೊಳಗೆ ವಿಶ್ವಾಸ ಮತಯಾಚನೆ ಮಾಡೋಣ ಅಂತ ಹೇಳಿದ್ರು. ಅದಕ್ಕೆ ಒಪ್ಪದ ಸ್ಪೀಕರ್ ಸಂಜೆ 4ಗಂಟೆ ಡೆಡ್ಲೈನ್ ನೀಡಿದ್ರು. ಸಿದ್ದರಾಮಯ್ಯ 6ಗಂಟೆ ಡೆಡ್ಲೈನ್ಗೆ ಮನವಿ ಮಾಡಿದ್ರು. ಅಂತಿಮವಾಗಿ ಸ್ಪೀಕರ್ ನಾಳೆ ಸಂಜೆ 6ಗಂಟೆಗೆ ‘ವಿಶ್ವಾಸ’ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದ್ದಾರೆ.