ಬೆಂಗಳೂರು : ರಾಜ್ಯಪಾಲರು ನೀಡಿದ್ದ ಗಡುವು ಮುಗಿದರೂ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಇನ್ನೂ ವಿಶ್ವಾಸ ಮತಯಾಚನೆ ಮಾಡಿಲ್ಲ.
ಇಂದು ಮಧ್ಯಾಹ್ನ 1.30ರೊಳಗಾಗಿ ವಿಶ್ವಾಸಮತ ಸಾಬೀತುಪಡಿಸಬೇಕು ಅಂತ ರಾಜ್ಯಪಾಲ ವಜುಭಾಯ್ ವಾಲಾರವರು ಸಿಎಂಗೆ ನಿನ್ನೆಯೇ ಸೂಚನೆ ನೀಡಿದ್ದರು. ಆದರೆ, ರಾಜ್ಯಪಾಲರು ನೀಡಿದ ಡೈಡ್ಲೈನ್ ಮುಗಿದಿದ್ದು ವಿಶ್ವಾಸ ಮತಯಾಚನೆ ಆಗಿಲ್ಲ.
ಸದ್ಯ ಸದನವನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಲಾಗಿದ್ದು, ರಾಜ್ಯ ರಾಜಕಾರಣ ಭಾರಿ ಕುತೂಹಲದ ಗೂಡಾಗಿದೆ.