Site icon PowerTV

ವಿರೋಧಪಕ್ಷದ ನಾಯಕನಾದ ನಾನು ಅಂದ್ರು ಸಿದ್ದರಾಮಯ್ಯ..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ವಿರೋಧಪಕ್ಷದ ನಾಯಕನಾದ ನಾನು’ ಅಂದಾಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಛೇಡಿಸಿದ ಸನ್ನಿವೇಶ ವಿಧಾನಸಭೆಯಲ್ಲಿ ನಡೆದಿದೆ..!
ಇಂದು ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮಾತನಾಡುವಾಗ ಶಾಸಕಾಂಗ ಪಕ್ಷದ ನಾಯಕ ಅನ್ನೋ ಬದಕು ವಿರೋಧಪಕ್ಷದ ನಾಯಕನಾದ ನಾನು ಅಂತ ಹೇಳಿದ್ರು..! ಅದಕ್ಕೆ ಬಿಜೆಪಿ ಶಾಸಕರು ಮೇಜುಕುಟ್ಟಿ ತಮಾಷೆ ಮಾಡಿದ್ರು..!
ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಏನು, ಬಹಳ ಖುಷಿಯಿಂದ ಮೇಜು ಕುಟ್ಟುತ್ತಿದ್ದೀರಲ್ಲಾ..?! ನಾನೂ ನಾಲ್ಕು ವರ್ಷ ವಿರೋಧಪಕ್ಷದ ಸ್ಥಾನದಲ್ಲೇ ಕುಳಿತು ಬಂದವನು ಮಾತಿನ ಭರದಲ್ಲಿ ವಿರೊಧಪಕ್ಷದ ನಾಯಕ ಅಂತ ಹೇಳಿದ್ದೇಷ್ಟೇ ಅಂದ್ರು.

Exit mobile version