Site icon PowerTV

ವಿಶ್ವಾಸ ಮತಯಾಚನೆಗೆ ಟೈಮ್​ ಫಿಕ್ಸ್..!

ಬೆಂಗಳೂರು : ವಿಶ್ವಾಸ ಮತಯಾಚನೆಗೆ ಟೈಮ್​ ಫಿಕ್ಸ್ ಆಗಿದ್ದು, 3 ದಿನಗಳ ಕಾಲ ದೋಸ್ತಿ ಸರ್ಕಾರಕ್ಕೆ ರಿಲೀಫ್ ಸಿಕ್ಕಿದೆ.
ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ವಿಶ್ವಾಸ ಮತಯಾಚನೆಗೆ ಸಮಯ ನಿಗದಿ ಪಡಿಸಿದ್ದಾರೆ. ಗುರುವಾರ ಸಿಎಂ ವಿಶ್ವಾಸ ಮತಯಾಚನೆ ಮಾಡುವಂತೆ ಸ್ಪೀಕರ್ ಸೂಚಿಸಿದ್ದಾರೆ.
ಸಿಎಂ ಕುಮಾರಸ್ವಾಮಿಯವರು ಬುಧವಾರಕ್ಕೇ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಪಡಿಸುವಂತೆ ಕೇಳಿಕೊಂಡಿದ್ದರು. ಆದರೆ, ಸ್ಪೀಕರ್ ಇನ್ನೂ ಒಂದು ದಿನ ಹೆಚ್ಚಿಗೆ ಕಾಲಾವಕಾಶ ನೀಡಿದ್ದಾರೆ.
ಬಿಜೆಪಿ ಇಂದೇ ಸಿಎಂ ವಿಶ್ವಾಸ ಮತಯಾಚನೆ ಮಾಡಬೇಕು ಅಂತ ಒತ್ತಾಯಿಸಿತ್ತು. ಸ್ಪೀಕರ್ ಗುರುವಾರಕ್ಕೆ ಸಮಯ ನಿಗದಿ ಮಾಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Exit mobile version